ಬೆಂಗಳೂರು: 66ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ 2021ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಈ ಬಾರಿ 66 ಸಾಧಕರಿಗೆ ಪ್ರಶಸ್ತಿ ಘೋಷಿಸಿರುವುದು ವಿಶೇಷ.
10 ಸಂಘ-ಸಂಸ್ಥೆಗಳಿಗೆ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿ ಘೋಷಿಸಲಾಗಿದೆ. ಆಡಳಿತ ಕ್ಷೇತ್ರದಲ್ಲಿ ಹೆಚ್.ಆರ್. ಕಸ್ತೂರಿ ರಂಗನ್, ಹಾವೇರಿ ಯೋಧ ನವೀನ್ ನಾಗಪ್ಪ, ಯಕ್ಷಗಾನ ಕ್ಷೇತ್ರದಲ್ಲಿ ಶಿವಮೊಗ್ಗದ ಗೋಪಾಲಾಚಾರ್ಯ ಹಾಗೂ ನಾಲ್ವರು ಹೊರನಾಡು ಕನ್ನಡಿಗರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ.
ಬಿದ್ದು ಬಿದ್ದು ನಗುವಂತೆ ಮಾಡುತ್ತೆ ವೈರಲ್ ಆಗಿರುವ ಈ ವಿಡಿಯೋ…!
ಸಾಹಿತ್ಯ ಕ್ಷೇತ್ರದಲ್ಲಿ ಮಹದೇವ ಶಂಕನಪುರ, ಪ್ರೊ.ಡಿ.ಟಿ.ರಂಗಸ್ವಾಮಿ, ಜಯಲಕ್ಷ್ಮಿ ಮಂಗಳ ಮೂರ್ತಿ ಸೇರಿದಂತೆ 6 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ.
ರಂಗಭೂಮಿ ಕ್ಷೇತ್ರದಲ್ಲಿ ಫಕಿರವ್ವ ರಾಮಪ್ಪ ಕೊಡಾಯಿ, ಪ್ರಕಾಶ್ ಬೆಳವಾಡಿ, ರಮೇಶ್ ಗೌಡ ಪಾಟೀಲ್ ಸೇರಿದಂತೆ ಐವರು ಸಾಧಕರಿಗೆ, ಜಾನಪದ ಕ್ಷೇತ್ರದಲ್ಲಿ 7 ಸಾಧಕರಿಗೆ ಸಂಗೀತ ಕ್ಷೇತ್ರದಲ್ಲಿ ಕೋಲಾರದ ಸಿ.ತ್ಯಾಗರಾಜು ಹಾಗೂ ದಕ್ಷಿಣ ಕನ್ನಡದ ಹೆರಾಲ್ಡ್ ಸಿರಿಲ್ ಡಿಸೋಜಾ ಇಬ್ಬರು ಸಾಧಕರಿಗೆ ಹಾಗೂ ಶಿಲ್ಪಕಲಾ ಕ್ಷೇತ್ರದಲ್ಲಿಇಬ್ಬರು ಸಾಧಕರಿಗೆ ಈ ಬಾರಿ ಪ್ರಶಸ್ತಿ ಘೋಷಿಸಲಾಗಿದೆ.