ಮುಸ್ಲಿಂರ ಪವಿತ್ರ ಧಾರ್ಮಿಕ ಕ್ಷೇತ್ರ ಮೆಕ್ಕಾದ ಹಜ್ ಯಾತ್ರೆಗೆ ತೆರಳಿದ್ದ 645 ಯಾತ್ರಿಕರು ಬಿಸಿ ಗಾಳಿಯಿಂದ ಸಾವನ್ನಪ್ಪಿರುವ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ.
ಉಷ್ಣಗಾಳಿಯಿಂದಾದ ಆರೋಗ್ಯ ಸಮಸ್ಯೆಯಿಂದಾಗಿ ಈ ದುರಂತ ಸಂಭವಿಸಿದ್ದು, ಅವರಲ್ಲಿ 90 ಜನರು ಭಾರತೀಯ ಮೂಲದವರು ಎಂದು ತಿಳಿದುಬಂದಿದೆ.
ಸೌದಿ ಸ್ಟೇಟ್ ಟಿವಿ ವರದಿ ಪ್ರಕಾರ ಮೆಕ್ಕಾದಲ್ಲಿನ ಗ್ರ್ಯಾಂಡ್ ಮಸೀದಿಯ ನೆರಳಿನಲ್ಲಿ 51.8 ಡಿಗ್ರಿ ಸೆಲ್ಸಿಯಸ್ ವರೆಗೆ ಉಷ್ಣಾಂಶ ಏರಿಕೆಯಾಗಿದೆ.
ಜರ್ನಲ್ ಆಫ್ ಟ್ರಾವೆಲ್ ಅಂಡ್ ಮೆಡಿಸಿನ್‌ನ 2024 ರ ಅಧ್ಯಯನದ ಪ್ರಕಾರ ಹೆಚ್ಚುತ್ತಿರುವ ಜಾಗತಿಕ ತಾಪಮಾನವು ಶಾಖವನ್ನು ನಿಯಂತ್ರಿಸಲು ಎಲ್ಲಾ ತಂತ್ರಗಳನ್ನು ಮೀರಿಸುತ್ತದೆ. ಸೌದಿ ಅರೇಬಿಯಾದಲ್ಲಿ ತಾಪಮಾನವು ಹೆಚ್ಚಾಗುತ್ತಿದ್ದಂತೆ, ಹಜ್ ಯಾತ್ರಿಕರು ತೀವ್ರ ಅಪಾಯವನ್ನು ಎದುರಿಸುತ್ತಿದ್ದು, ಈವರೆಗೆ ಒಟ್ಟು 645 ಯಾತ್ರಿಕರು ಸಾವನ್ನಪ್ಪಿದ್ದಾರೆ.