ವಯಸ್ಸು ಅನ್ನೊದು ಕೇವಲ ನಂಬರ್ಗಳಿಗೆ ಸೀಮಿತವಾಗಿರಬೇಕೇ ಹೊರತು ಮನಸ್ಸಿಗೆ ಅಲ್ಲ. ಸಾಧಿಸುವ ಛಲ ಇದ್ದರೆ ವಯಸ್ಸು ಕೂಡಾ ಅಡ್ಡಿ ಬರೋಲ್ಲ ಅನ್ನೋದಕ್ಕೆ ಹತ್ತು ಹಲವಾರು ಉದಾಹರಣೆಗಳು ಸಿಗುತ್ತೆ. ಅಂತಹದ್ದೇ ಒಂದು ಬೆಸ್ಟ್ ಎಗ್ಸಾಂಪಲ್ ಇಲ್ಲಿದೆ ನೋಡಿ.
ಇಲ್ಲಿದ್ದಾರೆ ನೋಡಿ ಮಿಸ್ಟರ್ ಜೇಮ್ಸ್, ಇವರು ಓರ್ವ ಟ್ರಕ್ ಡ್ರೈವರ್. ಇವರ ವಯಸ್ಸು 64. ಕೇರಳದ ವಯ್ನಾಡ್ ಜಿಲ್ಲೆಯ ಅಂಬಾಲಾವಾಯಲ್ ವಾಸಿಯಾಗಿರೋ ಇವರು ಓರ್ವ ಫುಟ್ಬಾಲ್ ಆಟಗಾರ. ಇವರು ಆಡುವ ಪರಿ ನೋಡ್ತಿದ್ರೆ ಇವರಿಗೆ ಇಷ್ಟು ವಯಸ್ಸಾಗಿರಬಹುದು ಅನ್ನೋ ಅಂದಾಜು ಕೂಡಾ ಯಾರೂ ಮಾಡಿರ್ಲಿಕ್ಕಿಲ್ಲ. ಭುಜ, ತಲೆಯಿಂದ ಫುಟ್ಬಾಲ್ ಆಡ್ತಿರೋದನ್ನ ನೋಡ್ತಿದ್ರೆ, ಯಾರೋ ಘಟಾನುಘಟಿ ಫುಟ್ಬಾಲ್ ಆಟಗಾರನೇ ಇರಬೇಕು ಅಂತ ಅನ್ಸುತ್ತೆ.
ಈ ವಿಡಿಯೋವನ್ನ ಪ್ರದೀಪ್ ರಮೇಶ್ ಅನ್ನೊ ವ್ಯಕ್ತಿ ತಮ್ಮ ಇನ್ಸ್ಟಾಗ್ರಾಮ್ಲ್ಲಿ ಹಂಚಿಕೊಂಡಿದ್ದು, ಈಗಾಗಲೇ ಸಾವಿರಾರು ಜನರು ಈ ವಿಡಿಯೋವನ್ನ ನೋಡಿ ಜೇಮ್ಸ್ ಅವರ ಟ್ಯಾಲೆಂಟ್ ಕಂಡು ಶಾಕ್ ಆಗಿದ್ದಾರೆ. ಶೇರ್ ಮಾಡಿಕೊಂಡಿರೋ ಈ ವಿಡಿಯೋ ಬಗ್ಗೆ ಪ್ರದೀಪ್ ` ಈ ವ್ಯಕ್ತಿಯ ಪರಿಚಯ ಆಗಿರೋದು ನನ್ನ ಅದೃಷ್ಟ. ಈಗಲೂ ಅವರು ಫುಟ್ಬಾಲ್ ಆಡುವ ಪರಿ ಅದ್ಭುತ. ಅವರು ಜೀವನ ನಡೆಸುವುದಕ್ಕಾಗಿ ಲಾರಿ ಓಡಿಸುತ್ತಾರೆ.
ಅದೇ ಲಾರಿಯಲ್ಲಿ ಅವರು ಫುಟ್ಬಾಲ್ ಇಟ್ಟುಕೊಂಡಿದ್ದು, ಸಮಯ ಸಿಕ್ಕಾಗೆಲ್ಲ ಆಡ್ತಾನೇ ಇರ್ತಾರೆ. ಅವರು ಈ ಹಿಂದೆ ಭಾರತದ ಫುಟ್ಬಾಲ್ ತಂಡದ ಸದಸ್ಯರಾಗಿದ್ದರು. ಈಗಲೂ ಅವರು ಫುಟ್ಬಾಲ್ ಬಗ್ಗೆ ಇರುವ ಪ್ರೀತಿಯನ್ನ ಹಾಗೆಯೇ ಇಟ್ಟುಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದ ಪ್ರದೀಪ್ ಹೇಳುವುದು ಏನಂದ್ರೆ, ನಿಮಗೆ ಏನಾದರೂ ಮಾಡುವ ಮನಸ್ಸಿದ್ದರೆ, ಹಿಂಜರಿಕೆ ಇಲ್ಲದೇ ಮಾಡಿ. ಮುಂದೊಂದು ದಿನ ಈ ಪ್ರಪಂಚವನ್ನ ಹಿಂದೆ ಬಿಟ್ಟು ನಾವೆಲ್ಲ ಮುಂದೆ ಹೋಗಿರ್ತೆವೆ. ಆದ್ದರಿಂದ ಪ್ರತಿಕ್ಷಣವೂ ಮುಂದಿನ ದಿನಗಳಲ್ಲಿ ನೆನಪಿಟ್ಟುಕೊಳ್ಳಬೇಕು ಹಾಗೆ ಬದುಕಬೇಕು` ಅಂತ ಬರೆದುಕೊಂಡಿದ್ದಾರೆ.
ಈಗಾಗಲೇ ಈ ಇನ್ಸ್ಟಾಗ್ರಾಮ್ ವಿಡಿಯೋಗೆ 3.4 ಲಕ್ಷ ಜನ ಇಷ್ಟ ಪಟ್ಟಿದ್ದಾರೆ. ಒಬ್ಬರಂತೂ ಈ ವಿಡಿಯೋ ನೋಡಿ ಪ್ರತಿಭೆಗೆ ವಯಸ್ಸು ಇರೊಲ್ಲ ಅಂತ ಬರೆದುಕೊಂಡಿದ್ದಾರೆ.
ಇನ್ನೊಬ್ಬರು `ನನಗೆ ಗೊತ್ತೇ ಇಲ್ಲ ನೀವು ಕೇರಳದಲ್ಲಿ ಇರೋದು ಅಂತ, ನಿಜವಾಗಿಯೂ ತಾವು ಕೇರಳದಲ್ಲಿ ಇರೋದಾ..?` ಎಂದಿದ್ದಾರೆ.
ಪ್ರತಿದಿನವೂ ಫುಟ್ಬಾಲ್ ಪ್ರ್ಯಾಕ್ಟಿಸ್ ಮಾಡುವ ಜೇಮ್ಸ್, ಈಗಲೂ ಬಾಲ್ ಹಿಡಿದುಕೊಂಡು ಆಡುವುದಕ್ಕೆ ನಿಂತರೆ ಯುವಕರೇ ನಾಚುವಂತೆ ಆಟ ಆಡುತ್ತಾರೆ.