
ಹೈದರಾಬಾದ್: ನಿಷೇಧಿತ ಸಿಪಿಐ (ಮಾವೀವಾದಿ) ಸಂಘಟನೆಯ 64 ಸದಸ್ಯರು ಪೊಲೀಸರ ಮುಂದೆ ಶರಣಾಗಿರುವ ಘಟನೆ ತೆಲಂಗಾಣದ ಭದ್ರಾದಿ ಕೊಠಗುಡಂ ಜಿಲೆಯಲ್ಲಿ ನಡೆದಿದೆ.
ಛತ್ತೀಸ್ ಗಢ ಹಾಗೂ ತೆಲಂಗಾಣ ಗಡಿ ಗ್ರಾಮಗಳ ಪ್ರದೇಶ ಸಮಿತಿ ಸದಸ್ಯ ಸೇರಿದಂತೆ ವಿವಿಧ ಕೇಡರ್ ಗೆ ಸೇರಿದ 64 ಮಾವೋವಾದಿಗಳು ನಕ್ಸಲ್ ಹಾದಿ ತ್ಯಜಿಸಿ ತಮ್ಮ ಕುಟುಂಬದೊಂದಿಗೆ ಶಾಂತಿಯುತ ಜೀವನ ನಡೆಸಲು ನಿರ್ಧರಿಸಿದ್ದಾರೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶರಣಾಗಲು ಹಾಗೂ ಸಾಮಾನ್ಯ ಜೀವನ ನಡೆಸಲು ಬಯಸುವ ಮಾವೋವಾದಿಗಳು ತಮ್ಮ ಸಮೀಪದ ಪೊಲಿಸ್ ಠಾಣೆ ಅಥವಾ ಜಿಲ್ಲಾ ಅಧಿಕಾರಿಗಳನ್ನು ತಮ್ಮ ಕುಟುಂಬ ಸದಸ್ಯರ ಮೂಲಕ ನೇರವಾಗಿ ಸಂಪರ್ಕಿಸಬಹುಇಉದು ಎಂದು ಪೊಲೀಸರು ತಿಳಿಸಿದ್ದಾರೆ.