alex Certify ಡಾನ್ಸ್ ಗೂ ಸೈ ಹಾಡೋಕು ಜೈ, ಟ್ಯಾಲೆಂಟ್ ನ ಖಜಾನೆ ಈ 63 ವರ್ಷದ ದಾದಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಾನ್ಸ್ ಗೂ ಸೈ ಹಾಡೋಕು ಜೈ, ಟ್ಯಾಲೆಂಟ್ ನ ಖಜಾನೆ ಈ 63 ವರ್ಷದ ದಾದಿ..!

ರವಿ ಬಾಲಶರ್ಮಾ ಅವರಿಗೆ ವಯಸ್ಸಾಗಿದ್ರು, ಇವರ ಟ್ಯಾಲೆಂಟ್ ಹಾಗೂ ಉತ್ಸಾಹ ಕಡಿಮೆಯಾಗಿಲ್ಲ. ಈ ಹಿಂದೆ ತಮ್ಮ ಅದ್ಭುತ ಡ್ಯಾನ್ಸ್ ಹಾಗೂ ಅಭಿನಯದ ವಿಡಿಯೋಗಳಿಂದ ವೈರಲ್ ಆಗಿದ್ದ ಶರ್ಮಾ ಅಜ್ಜಿ ಮತ್ತೊಂದು ಹೊಚ್ಚ ಹೊಸ ವಿಡಿಯೋದೊಂದಿಗೆ ಮರಳಿದ್ದಾರೆ. ಆದರೆ ಈ ಕ್ಲಿಪ್‌ನಲ್ಲಿ, ಅವರು ಯಾವುದೇ ಹಾಡಿಗೆ ನೃತ್ಯ ಮಾಡುತ್ತಿಲ್ಲ ಬದಲಿಗೆ ಹಾಡು ಹಾಡುತ್ತಿದ್ದಾರೆ. 63 ವರ್ಷದ ಬಾಲಾ ಶರ್ಮಾರವರು 2015 ರ ಚಲನಚಿತ್ರ ʼದಮ್ ಲಗಾ ಕೆ ಹೈಸಾʼದ ಮೋಹ್ ಮೋಹ್ ಕೆ ಧಾಗೆ ಎಂಬ ಪ್ರಸಿದ್ಧ ಹಾಡನ್ನು ಹಾಡುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಆಕೆಯ ಧ್ವನಿ ಖಂಡಿತವಾಗಿಯೂ ನಿಮ್ಮ ಮನಸ್ಸನ್ನ ಹಗುರಗೊಳಿಸಿ, ನಿಮ್ಮ ಮುಖದಲ್ಲಿ ನಗು ಮೂಡಿಸುತ್ತದೆ.

ವೈರಲ್ ಆಗಿರುವ ಈ ವಿಡಿಯೋದಲ್ಲಿ ರವಿ ಬಾಲಾ ಅವರು ಮೂಲತಃ ಮೊನಾಲಿ ಠಾಕೂರ್ ಹಾಡಿರುವ ಹಾಡನ್ನು ಹಾಡುತ್ತಿರುವುದನ್ನು ಕಾಣಬಹುದು. ಅವರು ಸುಂದರವಾದ ಬೂದು ಮತ್ತು ಚಿನ್ನದ ಬಣ್ಣದ ಸೀರೆಯನ್ನು ಧರಿಸಿ, ನಗುಮುಖದೊಂದಿಗೆ ಭಾವಪೂರ್ಣವಾಗಿ ಹಾಡಿದ್ದಾರೆ. ನಮ್ಮಂತೆಯೇ ನೀವೂ ಸಹ ಆಕೆಯ ಸುಮಧುರ ಕಂಠಕ್ಕೆ ಮರುಳಾಗೋದು ಗ್ಯಾರಂಟಿ.

ಇದು ನನ್ನ ಮೊದಲ ಹಾಡು, ನೀವು ಇದನ್ನು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. #ageisjustanumber, ಎಂಬ ಶೀರ್ಷಿಕೆಯಡಿ ಅಪ್ಲೋಡ್ ಆಗಿರುವ ಈ ವಿಡಿಯೋಗೆ ಒಂದು ಲಕ್ಷ ವ್ಯೂವ್ಸ್ ದೊರೆತಿದೆ. ದೇಸಿದಾದಿ ಎಂದೇ ಫೇಮಸ್ ಆಗಿರುವ, 63 ವರ್ಷದ ರವಿ ಬಾಲಾ ಶರ್ಮಾರವರ ಈ ವಿಡಿಯೋಗು ನೆಟ್ಟಿಗರು ಪ್ರೀತಿ ನೀಡಿದ್ದಾರೆ.

https://youtu.be/Hih0D-X-1r4

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...