ಕೋವಿಡ್-19 ವಿರುದ್ಧ ಮಕ್ಕಳಿಗೂ ಲಸಿಕೆ ಹಾಕಬೇಕೆಂದು ಸರ್ವೇಯೊಂದರಲ್ಲಿ ಭಾಗಿಯಾದ 63%ನಷ್ಟು ಪೋಷಕರು ಆಗ್ರಹಿಸಿದ್ದಾರೆ.
’ಜರ್ನಲ್ ಆಫ್ ಫ್ಯಾಮಿಲಿ ಮೆಡಿಸಿನ್ ಅಂಡ್ ಫ್ಯಾಮಿಲಿ ಹೆಲ್ತ್‌ಕೇರ್’ ನಿಯತಕಾಲಿಕೆಯಲ್ಲಿ ಪ್ರಕಟಿಸಲಾದ ಸರ್ವೇ ವರದಿಯನ್ನು ನವದೆಹಲಿ ಮೂಲದ ವರ್ಧಮಾನ್ ಮಹಾವೀರ್ ಕಾಲೇಜು ಮತ್ತು ಸಫ್ದರ್‌ಜಂಗ್ ಆಸ್ಪತ್ರೆಯ ಸಮುದಾಯ ಔಷಧ ವಿಭಾಗ ಸಿದ್ಧಪಡಿಸಿವೆ.
ಸರ್ವೇಯಲ್ಲಿ ಭಾಗಿಯಾದ 70.44%ರಷ್ಟು ಮಂದಿ ಲಸಿಕೆ ಪಡೆಯಲು ಉತ್ಸುಕರಾಗಿದ್ದರೆ 29.55% ಮಂದಿಗೆ ಲಸಿಕೆ ಪಡೆಯುವ ಇಚ್ಛೆಯಿಲ್ಲ. ಸರ್ವೇಯಲ್ಲಿ ಭಾಗಿಯಾದ 467 ಮಂದಿಯ ಪೈಕಿ ಆರೋಗ್ಯ ಕಾರ್ಯಕರ್ತರೂ ಇದ್ದು, ಇವರಲ್ಲಿ 72.58% ಮಂದಿ ತಮ್ಮ ಮಕ್ಕಳಿಗೆ ಲಸಿಕೆ ಪಡೆಯುವುದಕ್ಕೆ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ.
ಬೆಂಗಳೂರು ಜನತೆಗೆ ಸಿಎಂ ಬಸವರಾಜ ಬೊಮ್ಮಾಯಿ ಗುಡ್ ನ್ಯೂಸ್
ಸರ್ವೇಯಲ್ಲಿ ಭಾಗಿಯಾದ ಮಂದಿಯಲ್ಲಿ ಆರೋಗ್ಯಸೇವಾ ಕಾರ್ಯಕರ್ತರು, ವೃತ್ತಿಪರರು, ಮನೆಯೊಡತಿಯರು ಹಾಗೂ ವಿದ್ಯಾರ್ಥಿಗಳೂ ಭಾಗಿಯಾಗಿದ್ದು, ಇವರಿಗೆ 13 ಭಿನ್ನ ಪ್ರಶ್ನೆಗಳನ್ನು ಕೇಳಲಾಗಿದೆ.
ಈ ಬಗ್ಗೆ ಮಾತನಾಡಿದ ಸಫ್ದರ್‌ಜಂಗ್ ಆಸ್ಪತ್ರೆ “ಕೋವಿಡ್-19 ವಿರುದ್ಧ ತಮ್ಮ ಮಕ್ಕಳಿಗೆ ಲಸಿಕೆ ಪಡೆಯಲು 63.1% ಮಂದಿ ಇಚ್ಛಿಸುತ್ತಿದ್ದಾರೆ ಎಂಬುದು ಸಕಾರಾತ್ಮಕ ವಿಷಯ. ಇದರಿಂದಾಗಿ ಲಸಿಕೆ ಕಾರ್ಯಕ್ರಮವನ್ನು ಸ್ಥಿರವಾದ ಪ್ರಗತಿಯೊಂದಿಗೆ ಕೊಂಡೊಯ್ಯಬಹುದಾಗಿದೆ” ಎಂದು ತಿಳಿಸಿದ್ದಾರೆ.