
ದೇಶವನ್ನು ಕಳೆದ ಎರಡು ವರ್ಷಗಳಿಂದ ಕೊರೋನಾದ ಮೂರು ಅಲೆಗಳು ಕಾಡಿದ್ದು, ಈಗ ನಾಲ್ಕನೇ ಅಲೆ ಆರಂಭವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ತೀವ್ರ ಇಳಿಮುಖವಾಗಿದ್ದ ಕೊರೊನಾ ಸೋಂಕಿನ ಪ್ರಕರಣಗಳು ಕಳೆದ ಕೆಲವು ದಿನಗಳಿಂದ ಏರಿಕೆಯ ಹಾದಿ ಹಿಡಿದಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ದು, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಕೊರೊನಾ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ಶೈಕ್ಷಣಿಕ ವಲಯಕ್ಕೆ ತೀವ್ರವಾದ ಹೊಡೆತ ಬಿದ್ದಿದ್ದು, ಈಗ ಸೋಂಕಿನ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದ ಕಾರಣ ಆಫ್ಲೈನ್ ತರಗತಿಗಳು ಆರಂಭವಾಗಿದ್ದವು. ಇದೀಗ ಕೊರೊನಾ ಮತ್ತೆ ಏರಿಕೆಯಾಗುತ್ತಿರುವ ಕಾರಣ ಆನ್ಲೈನ್ ತರಗತಿಗಳನ್ನು ಆರಂಭಿಸಲಾಗುತ್ತದಾ ಎಂಬ ಪ್ರಶ್ನೆ ಮೂಡಿದೆ. ಈ ಕುರಿತಂತೆ ಸಂಸ್ಥೆಯೊಂದು ಸಮೀಕ್ಷೆ ನಡೆಸಿದ್ದು, ಇದರಲ್ಲಿ ಕುತೂಹಲಕಾರಿ ಅಂಶ ಬಹಿರಂಗವಾಗಿದೆ.
ಆತ್ಮಾಹುತಿ ಬಾಂಬ್ ದಾಳಿಗೆ ಕಾಬೂಲ್ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ 50 ಕ್ಕೂ ಅಧಿಕ ಮಂದಿ ಸಾವು
ಆನ್ಲೈನ್ ಪ್ಲಾಟ್ಫಾರ್ಮ್ ‘ಲೋಕಲ್ ಸರ್ಕಲ್ಸ್’ ಆನ್ಲೈನ್ ತರಗತಿ ಆರಂಭದ ಕುರಿತು ದೇಶದ 314 ಜಿಲ್ಲೆಗಳಲ್ಲಿ 23,500 ಮಂದಿ ಪೋಷಕರಿಂದ ಆನ್ಲೈನ್ ಮೂಲಕ ಅಭಿಪ್ರಾಯ ಸಂಗ್ರಹಿಸಿದ್ದು, ಈ ಪೈಕಿ ಶೇಕಡಾ 63 ರಷ್ಟು ಮಂದಿ ಜಿಲ್ಲೆಗಳಲ್ಲಿ ಕೊರೋನಾ ಸೋಂಕಿನ ಪ್ರಕರಣ ಶೇಕಡಾ 5ರಷ್ಟು ಮೀರಿದರೆ ಆನ್ಲೈನ್ ತರಗತಿ ಆರಂಭಿಸಲು ಒಲವು ತೋರಿದ್ದಾರೆ. ಶೇಕಡ 27ರಷ್ಟು ಮಂದಿ ಸೋಂಕಿನ ಪ್ರಕರಣ ಶೇಕಡ 2 ಮೀರಿದರೆ ಸರ್ಕಾರ ಆನ್ಲೈನ್ ತರಗತಿ ಆರಂಭಿಸಲಿ ಎಂದಿದ್ದಾರೆ.
ಇನ್ನುಳಿದವರು ಯಾವುದೇ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಈ ಸಮೀಕ್ಷೆಯಲ್ಲಿ ಶೇಕಡಾ 62ರಷ್ಟು ಪುರುಷರು ಹಾಗೂ ಶೇಕಡ 38 ರಷ್ಟು ಮಹಿಳೆಯರು ಪಾಲ್ಗೊಂಡಿದ್ದರು.