alex Certify ರಾಜ್ಯದಲ್ಲಿ ಹೊಸ ಕ್ರಿಮಿನಲ್ ಕಾನೂನು ಜಾರಿಯಾದ ಮೊದಲ ದಿನವೇ 63 ಪ್ರಕರಣ ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದಲ್ಲಿ ಹೊಸ ಕ್ರಿಮಿನಲ್ ಕಾನೂನು ಜಾರಿಯಾದ ಮೊದಲ ದಿನವೇ 63 ಪ್ರಕರಣ ದಾಖಲು

ಬೆಂಗಳೂರು: ದೇಶಾದ್ಯಂತ ಹೊಸ ಕ್ರಿಮಿನಲ್ ಅಪರಾಧ ಕಾನೂನು ಜಾರಿಯಾದ ಮೊದಲ ದಿನವೇ ರಾಜ್ಯದಲ್ಲಿ 63 ಪ್ರಕರಣ ದಾಖಲಾಗಿವೆ.

ಜುಲೈ 1ರ ಸೋಮವಾರದಿಂದ ದೇಶಾದ್ಯಂತ ಮೂರು ಹೊಸ ಕ್ರಿಮಿನಲ್ ಅಪರಾಧ ಕಾನೂನುಗಳು ಜಾರಿಯಾಗಿದ್ದು, ಮೊದಲ ದಿನ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸೋಮವಾರ ರಾತ್ರಿ 8 ಗಂಟೆವರೆಗೆ 63 ಪ್ರಕರಣ ದಾಖಲಾಗಿವೆ.

ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಕಾನೂನಿನಡಿ ಮೊದಲ ಪ್ರಕರಣ ಸೋಮವಾರ ರಾತ್ರಿ ಜಾವಾ 1:30ರ ಸುಮಾರಿಗೆ ಯುಡಿಆರ್ ದಾಖಲಾಗಿದೆ.

ದೇಶಾದ್ಯಂತ ಸೋಮವಾರದಿಂದ ಭಾರತೀಯ ನ್ಯಾಯ ಸಂಹಿತೆ(BNS), ಭಾರತಿಯ ನಾಗರಿಕ ಸುರಕ್ಷತಾ ಸಂಹಿತೆ(BNSS), ಭಾರತೀಯ ಸಾಕ್ಷ್ಯ ಅಧಿನಿಯಮ(BSA) ಹೊಸ ಕಾನೂನು ಜಾರಿಯಾಗಿವೆ. ಈ ಕಾನೂನುಗಳಡಿ ಕೇಸ್ ದಾಖಲಿಸಲಾಗುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...