alex Certify ಕೇವಲ 24 ಗಂಟೆ ಅವಧಿಯಲ್ಲಿ 6000 ಕೋಟಿ ರೂ. ಮೊತ್ತದ 1,830 ಟೆಂಡರ್ ಕರೆದ ಸರ್ಕಾರ: ಆಮ್ ಆದ್ಮಿ ಪಕ್ಷ ಆರೋಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ 24 ಗಂಟೆ ಅವಧಿಯಲ್ಲಿ 6000 ಕೋಟಿ ರೂ. ಮೊತ್ತದ 1,830 ಟೆಂಡರ್ ಕರೆದ ಸರ್ಕಾರ: ಆಮ್ ಆದ್ಮಿ ಪಕ್ಷ ಆರೋಪ

ಬೆಂಗಳೂರು: ಕೇವಲ 24 ಗಂಟೆಗಳ ಅಂತರದಲ್ಲಿ ರಾಜ್ಯ ಸರ್ಕಾರ 1830 ಟೆಂಡರ್ ಗಳಿಗೆ ಆಹ್ವಾನ ನೀಡಿ ಕೆಲವೇ ದಿನಗಳ ಕಾಲಾವಕಾಶ ನೀಡಿರುವುದಾಗಿ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಆರೋಪಿಸಿದ್ದಾರೆ.

ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಪೃಥ್ವಿ ರೆಡ್ಡಿ ಅವರು ಈ ಸಂಬಂಧ 462 ಪುಟಗಳ ದಾಖಲೆ ಬಿಡುಗಡೆ ಮಾಡಿದ್ದಾರೆ. ಫೆಬ್ರವರಿ 24ರ ಬೆಳಿಗ್ಗೆ 2.30 ರಿಂದ ಫೆಬ್ರವರಿ 25ರ ಬೆಳಿಗ್ಗೆ 2.30 ರ ನಡುವೆ ಕೇವಲ 24 ಗಂಟೆಗಳ ಅವಧಿಯಲ್ಲಿ 6000 ಕೋಟಿ ರೂಪಾಯಿ ಮೊತ್ತದ 1830 ಅಲ್ಪಾವಧಿ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ.

ಒಟ್ಟು 15 ರಿಂದ 20 ಸಾವಿರ ಕೋಟಿ ರೂಪಾಯಿ ಮೊತ್ತದ ವಿವಿಧ ಟೆಂಡರ್ ಕರೆದ ಮಾಹಿತಿ ಇದೆ. ಇದರಲ್ಲಿ 6 ಸಾವಿರ ಕೋಟಿ ರೂಪಾಯಿ ಮೊತ್ತದ ಟೆಂಡರ್ ಗಳ ಮಾಹಿತಿ ಮಾತ್ರ ಸಿಕ್ಕಿದೆ. ಕೇವಲ 24 ಗಂಟೆಗಳ ಅವಧಿಯಲ್ಲಿ ದಿಢೀರ್ ಇಷ್ಟೊಂದು ಅಲ್ಪಾವಧಿ ಟೆಂಡರ್ ಕರೆಯುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...