ನವದೆಹಲಿ: 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಬೂಸ್ಟರ್ ಡೋಸ್ ನೀಡುವ ವಿಚಾರವಾಗಿ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಈಗಾಗಲೇ ಕೇಂದ್ರ ಸರ್ಕಾರವು 15 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಒಪ್ಪಿಗೆ ಸೂಚಿಸಿದೆ. ಇದರ ಬೆನ್ನಲ್ಲಿಯೇ ರೋಗದಿಂದ ಬಳಲುತ್ತಿರುವ ಅಥವಾ 60 ವರ್ಷ ಮೇಲ್ಪಟ್ಟವರು ಬೂಸ್ಟರ್ ಡೋಸ್ ಪಡೆಯಬಹುದು ಎಂದು ಹೇಳಿದೆ.
BIG NEWS: ರಾಜ್ಯದಲ್ಲಿ ಮತ್ತೊಂದು ಒಮಿಕ್ರಾನ್ ಪ್ರಕರಣ ಪತ್ತೆ; ವಿದೇಶಿ ವಿದ್ಯಾರ್ಥಿನಿಗೆ ರೂಪಾಂತರಿ ವೈರಸ್
ಬೂಸ್ಟರ್ ಡೋಸ್ ಪಡೆಯಲು ಯಾವುದೇ ಪರವಾನಿಗೆ ಅಥವಾ ವೈದ್ಯರ ಪರವಾನಿಗೆ ಪತ್ರ ಬೇಕಾಗಿಲ್ಲ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.
ಆದರೆ, ವಿವಿಧ ರೋಗಗಳಿಂದ ಬಳಲುತ್ತಿರುವವರು ಚಿಕಿತ್ಸೆ ಪಡೆಯುತ್ತಿರುವ ವೈದ್ಯರೊಂದಿಗೆ ಚರ್ಚಿಸಿ ಬೂಸ್ಟರ್ ಡೋಸ್ ಪಡೆಯಬಹುದು ಎಂದು ಸರ್ಕಾರ ಹೇಳಿದೆ. ಆದರೆ ಮೂರನೇ ಲಸಿಕೆ ಯಾವುದು ಎನ್ನುವುದರ ಕುರಿತು ಸರ್ಕಾರ ಇದುವರೆಗೂ ಹೇಳಿಲ್ಲ.