24 ನಿಮಿಷ 50 ಸೆಕೆಂಡ್‌ಗಳಲ್ಲಿ 108 ಮಂತ್ರಗಳ ಪಠಣ ಮಾಡುವ ಮೂಲಕ ಒಡಿಶಾದ ಆರು ವರ್ಷದ ಈ ಪೋರಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ್ದಾಳೆ.
ರಾಜ್ಯದ ಜಗತ್ಪುರ ಜಿಲ್ಲೆಯ ತರಾಡಾಪಾಡಾ ಗ್ರಾಮದ ಶಿಕ್ಷಣ ತಜ್ಞ ರಶ್ಮಿ ರಂಜನ್ ಮಿಶ್ರಾರ ಮೊಮ್ಮಗಳಾದ ಡಿ ಸಾಯಿ ಶ್ರೇಯಾಂಶಿ ಈ ವಂಡರ್ ಗರ್ಲ್.
ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಸಂತಸದ ಸುದ್ದಿ
“ನಮ್ಮ ಮನೆಯಲ್ಲಿ ಪ್ರತಿ ವಾರ ಮಾಡುವ ಪೂಜೆಗಳ ವೇಳೆ ಪೂಜಾರಿ ಮಂತ್ರಗಳ ಪಠಣ ಮಾಡುವುದನ್ನು ನೋಡುತ್ತಾ ನಾನು ಸಹ ಮಂತ್ರಗಳನ್ನು ಕಲಿತೆ. ನನ್ನ ಅಜ್ಜ ಹಾಗೂ ಅಜ್ಜಿ ಸಹ ಈ ಮಂತ್ರಗಳನ್ನು ಕಲಿಯಲು ನೆರವಾಗಿದ್ದಾರೆ,” ಎಂದು ಒಂದನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಈ ಬಾಲೆ ಹೇಳಿದ್ದಾಳೆ.
ಬ್ಯಾಂಕ್ ದರೋಡೆ ಮಾಡಿದ ಕಳ್ಳರ ಖತರ್ನಾಕ್ ಪ್ಲಾನ್ ಕೇಳಿದ್ರೆ ಬೆಚ್ಚಿಬೀಳ್ತೀರಾ..!
ಮಂತ್ರಗಳ ಪಠಣದೊಂದಿಗೆ ಈ ಬಾಲೆಗೆ ಒಡಿಸ್ಸಿ ಶಾಸ್ತ್ರೀಯ ನೃತ್ಯದ ಮೇಲೂ ಒಲವಿದೆ.
“ನಮ್ಮ ಮಗಳ ಸಾಧನೆಯ ಬಗ್ಗೆ ನಮಗೆ ಹೆಮ್ಮೆ ಇದೆ. ಆಕೆ ಒಡಿಸ್ಸಿಯಲ್ಲೂ ಹೆಸರು ಮಾಡುತ್ತಾಳೆ ಎನ್ನುವ ಭರವಸೆ ನಮ್ಮದು,” ಎನ್ನುತ್ತಾರೆ ಬಾಲೆಯ ತಾಯಿ ಶಶ್ಮಿತಾ ಮಿಶ್ರಾ.
ಬ್ಯಾಂಕ್ ದರೋಡೆ ಮಾಡಿದ ಕಳ್ಳರ ಖತರ್ನಾಕ್ ಪ್ಲಾನ್ ಕೇಳಿದ್ರೆ ಬೆಚ್ಚಿಬೀಳ್ತೀರಾ..!
ವರ್ಷದ ಆರಂಭದಲ್ಲಿ, ಪಶ್ಚಿಮ ಬಂಗಾಳದ ಮಿಡ್ನಾಪುರದ ಮೂರೂವರೆ ವರ್ಷದ ಪೋರಿ ಆತ್ರಿಕಾ ಘೋಷ್ ಬೆಂಗಾಲಿ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ 50ಕ್ಕೂ ಹೆಚ್ಚಿನ ಪದ್ಯಗಳನ್ನು ನೋಡದೇ ಹೇಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದಳು. ರಬೀಂದ್ರ ಸಂಗೀತ, ಜಾನಪದ ಸಂಗೀತ, ಭಕ್ತಿ ಗೀತೆಗಳು ಹಾಗೂ ಸಿನೆಮಾ ಹಾಡುಗಳು ಸೇರಿದಂತೆ 20ರಷ್ಟು ಹಾಡುಗಳನ್ನು ಸಹ ನೋಡದೇ ಹಾಡುವ ಛಾತಿ ಈ ಪುಟ್ಟಿಯದ್ದು.
ಇಷ್ಟು ಪುಟ್ಟ ವಯಸ್ಸಿನಲ್ಲೇ ಇವೆಲ್ಲವನ್ನೂ ಮಾಡಿರುವ ಈ ಬಾಲೆಯ ಸಾಧನೆಯನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗುರುತಿಸಿ, ಪ್ರಮಾಣ ಪತ್ರ ನೀಡಿ ಗೌರವಿಸಿದೆ.