ಮಕ್ಕಳ ವಿಶೇಷ ಸಾಮರ್ಥ್ಯಗಳು ಆಗಿಂದಾಗ್ಗೆ ಬೆಳಕಿಗೆ ಬರುತ್ತದೆ. ಈಗ ಆರು ವರ್ಷದ ಬಾಲಕಿಯೊಬ್ಬಳು ಒಂದು ನಿಮಿಷದಲ್ಲಿ 93 ವಿಮಾನಯಾನ ಸಂಸ್ಥೆಗಳನ್ನು ಗುರುತಿಸಿ ವಿಶ್ವದಾಖಲೆಯ ಪಟ್ಟಿಗೆ ಸೇರಿದ್ದಾಳೆ.
ಅರ್ನಾ ಗುಪ್ತಾ ಹರಿಯಾಣದ ಪಂಚಕುಲ ಮೂಲದ ಬಾಲಕಿ. ವಿಮಾನದ ಕೊನೆಯ ಭಾಗಗಳಿಂದ, ಸಿಂಗಾಪುರ್ ಏರ್ಲೈನ್ಸ್, ಮಲೇಷಿಯನ್ ಏರ್ಲೈನ್ಸ್, ಥಾಯ್, ಡೆಲ್ಟಾ, ಕ್ವಾಂಟಾಸ್ ಮುಂತಾದ ಪ್ರಮುಖ ವಿಮಾನಯಾನ ಸಂಸ್ಥೆಗಳನ್ನು ಗುರುತಿಸಲು ಆಕೆಗೆ ಸಾಧ್ಯವಾಗುತ್ತದೆ ಎಂಬುದು ವಿಶೇಷ ಸಂಗತಿ.
ತನ್ನ ಅಪರೂಪದ ಜ್ಞಾಪಕ ಶಕ್ತಿಗಾಗಿ ಜುಲೈ 1ರಂದು ಪ್ರಮಾಣಪತ್ರ ಪಡೆದುಕೊಂಡಿದ್ದು, ವಿಶ್ವದ ಗಮನ ಸೆಳೆದಿದ್ದಾಳೆ.
BREAKING: ಈಶ್ವರನ ಹೆಸರಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಪ್ರಮಾಣ
ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಈಕೆಯ ಅದ್ಭುತ ವಿಡಿಯೊವನ್ನು ಹಂಚಿಕೊಂಡಿದೆ. ಅವಳು ಹೆಸರನ್ನು ಹೇಳಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಸಿಂಗಾಪುರ್ ಏರ್ಲೈನ್ಸ್ ನಿಂದ ಥಾಯ್ ವರೆಗೆ ಸ್ವಿಸ್ ಮತ್ತು ಕ್ವಾಂಟಾಸ್ ವರೆಗೆ ಅನಾಯಾಸವಾಗಿ ಗುರುತಿಸಿದ್ದಾಳೆ.
ನನ್ನ ತಾಯಿ ಯಾವಾಗಲೂ ಹೆಚ್ಚು ಕಲಿಯಲು ಪ್ರೇರೇಪಿಸುತ್ತಿದ್ದಳು. ಆಕೆ ಈ ಅಭ್ಯಾಸದ ಹಿಂದಿನ ಶಕ್ತಿಯಾಗಿದ್ದಾಳೆ, ಆದ್ದರಿಂದ ಈಗ ನಾನು ಎಲ್ಲ ವಿವರಗಳನ್ನು ನೆನಪಿಸಿಕೊಳ್ಳಬಲ್ಲೆ ಎಂದು ಪ್ರತಿಕ್ರಿಯೆ ನೀಡಿದ್ದಾಳೆ ಪುಟ್ಟ ಬಾಲಕಿ.