
ಹೈದರಾಬಾದ್: ಅಮೆರಿಕದ ಫ್ಲೋರಿಡಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ತೆಲಂಗಾಣದ ಕುಟುಂಬದ ಮೂವರು ಸದಸ್ಯರಲ್ಲಿ ಮಹಿಳಾ ಸಾಫ್ಟ್ ವೇರ್ ವೃತ್ತಿಪರೆ ಮತ್ತು ಅವರ ಆರು ವರ್ಷದ ಮಗ ಸೇರಿದ್ದಾರೆ ಎಂದು ಅವರ ಸಂಬಂಧಿಕರು ಸೋಮವಾರ ಇಲ್ಲಿ ತಿಳಿಸಿದ್ದಾರೆ.
ಪ್ರಗತಿ ರೆಡ್ಡಿ(35), ಅವರ ಮಗ ಮತ್ತು ಅತ್ತೆ(56) ಸಾವನ್ನಪ್ಪಿದ್ದಾರೆ ಮತ್ತು ಕಾರ್ ಚಾಲನೆ ಮಾಡುತ್ತಿದ್ದ ಅವರ ಪತಿ ಟ್ರಕ್ ಅಪಘಾತದಲ್ಲಿ ಗಾಯಗೊಂಡಿದ್ದಾರೆ ಎಂದು ಮಹಿಳೆಯ ತಂದೆ ಮೋಹನ್ ರೆಡ್ಡಿ ತಿಳಿಸಿದ್ದಾರೆ.
ಕುಟುಂಬವು ರಂಗಾರೆಡ್ಡಿ ಜಿಲ್ಲೆಯ ತೇಕುಲಪಲ್ಲಿ ಗ್ರಾಮದವರಾಗಿದ್ದಾರೆ.
ನನ್ನ ಮಗಳು 2012 ರಲ್ಲಿ ಅಮೆರಿಕಕ್ಕೆ ಹೋಗಿದ್ದಳು ಮತ್ತು ಅಲ್ಲಿ ಎಂಎಸ್ ಮಾಡಿದ್ದಳು. ಇಂದು ಬೆಳಿಗ್ಗೆ 4 ಗಂಟೆಗೆ ತಪ್ಪು ಮಾರ್ಗದಲ್ಲಿ ಬಂದ ವಾಹನವು ನಮ್ಮ ಕುಟುಂಬ ಪ್ರಯಾಣಿಸುತ್ತಿದ್ದ ಕಾರ್ ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ನಮಗೆ ಮಾಹಿತಿ ಸಿಕ್ಕಿತು. ಅಪಘಾತದ ಬಗ್ಗೆ ನನಗೆ ಹೆಚ್ಚಿನ ವಿವರಗಳಿಲ್ಲ. ನನ್ನ ಅಳಿಯ ಮತ್ತು ನನ್ನ ಎಂಟು ತಿಂಗಳ ಮೊಮ್ಮಗ ಬದುಕುಳಿದರು ಎಂದು ಮೋಹನ್ ರೆಡ್ಡಿ ತಿಳಿಸಿದ್ದಾರೆ.
ಟೇಕುಲಪಲ್ಲಿ ಸ್ಥಳೀಯ ಸಂಸ್ಥೆಯ ಮಾಜಿ ಪ್ರತಿನಿಧಿ ಮೋಹನ್ ರೆಡ್ಡಿ ಅವರು ಅಮೆರಿಕಕ್ಕೆ ತೆರಳುವುದಾಗಿ ಹೇಳಿದ್ದಾರೆ.
ಮೋಹನ್ ರೆಡ್ಡಿ ಅವರ ಕುಟುಂಬದ ಮತ್ತೊಬ್ಬ ಸದಸ್ಯರ ಪ್ರಕಾರ, ಪ್ರಗತಿ ರೆಡ್ಡಿ ಅವರ ಕುಟುಂಬ ವಾರಾಂತ್ಯದ ಪ್ರವಾಸದ ನಂತರ ಮನೆಗೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.