
ಈ ವಿಡಿಯೋವನ್ನು ನಾಗ್ಪುರ ಬಳಿಯ ಉಮ್ರೇದ್ ಕರ‍್ಹಾಂಡ್ಲಾ ಅಭಯಾರಣ್ಯದಲ್ಲಿ ರೆಕಾರ್ಡ್ ಮಾಡಲಾಗಿದೆ. ಕಾಡಿನ ಪಥವೊಂದರಲ್ಲಿ ಆರು ಹುಲಿಗಳು ಓಡಾಡುತ್ತಿರುವುದನ್ನು ನೋಡಬಹುದು. ಕೆಲ ಸೆಕೆಂಡ್‌ಗಳ ಬಳಿಕ ವಾಹನವೊಂದು ಹುಲಿಗಳತ್ತ ಹಿಂದಿನಿಂದ ಬರುತ್ತಿರುವುದನ್ನು ನೋಡಬಹುದು.
BIG NEWS: ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಎಬಿಡಿ ವಿಲಿಯರ್ಸ್....!
ಹುಲಿಗಳ ಪೈಕಿ ಒಂದು ಕಾಡಿನೊಳಗೆ ಓಡಿಹೋದರೆ ಮಿಕ್ಕವು ಅದೇ ಹಾದಿಯಲ್ಲಿ ನಡೆದುಕೊಂಡು ಸಾಗುತ್ತವೆ. ಗುಂಪಿನಲ್ಲಿ ಮುಂಚೂಣಿಯಲ್ಲಿ ಸಾಗುತ್ತಿರುವ ಹುಲಿ ತನ್ನನ್ನ ಇತರ ಪ್ರಾಣಿಗಳು ಬಂದು ಕೂಡಿಕೊಳ್ಳಬೇಕೆಂದು ಕಾಯುತ್ತದೆ.
ಸಾಮಾನ್ಯವಾಗಿ ಒಬ್ಬಂಟಿಯಾಗಿ ಅಲೆಯುವ ಹುಲಿಗಳನ್ನು ನೋಡುವ ನಮಗೆ ಗುಂಪುಗಳಲ್ಲಿ ವ್ಯಾಘ್ರಗಳನ್ನು ನೋಡಲು ಸಿಕ್ಕಿದ್ದು ಬಹುಶಃ ನೆನಪಿನಲ್ಲಿ ಇರಲಿಕ್ಕಿಲ್ಲ. ತಾಯಿ ಹುಲಿ ತನ್ನ ಮರಿಗಳೊಂದಿಗೆ ಇರುವ ವೇಳೆ ಹೀಗೆ ಹಿಂಡುಗಳನ್ನು ನೋಡಬಹುದಾಗಿದೆ.