ಬೆಂಗಳೂರು: ನಾಲ್ಕು ರಾಜ್ಯಗಳಿಗೆ ಬೇಕಾಗಿದ್ದ ಮೋಸ್ಟ್ ವಾಟೆಂಡ್ 6 ನಕ್ಸಲರು ಗೃಹಕಚೇರಿ ಕೃಷ್ಣಾದಲ್ಲಿ ನಿನ್ನೆ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಪರಮೇಶ್ವರ್ ಮುಂದೆ ಶರಣಾಗತರಾಗಿದ್ದಾರೆ. ಆದರೆ ನಕ್ಸಲ್ ಪಟ್ಟಿಯಲ್ಲಿದ್ದ ಓರ್ವ ನಕ್ಸಲ್ ಮಾತ್ರ ಶರಣಾಗದೇ ಉಳಿದುಕೊಂಡಿದ್ದಾನೆ.
ಕರ್ನಟಕದ ನಾಲ್ವರು, ಹೊರ ರಾಜ್ಯದ ಇಬ್ಬರು ನಕ್ಸಲರು ಸೇರಿ 6 ನಕ್ಸಲರು ಶರಣಾಗಿದ್ದು, ನಕ್ಸಲ್ ಪಟ್ತಿಯಲ್ಲಿದ್ದ ಮತ್ತೋರ್ವ ನಕ್ಸಲ್ ರವೀಂದ್ರ ಯಾರ ಸಂಪರ್ಕಕ್ಕೂ ಸಿಗದೇ ತಲೆಮರೆಸಿಕೊಂಡಿದ್ದಾನೆ.
ನಕ್ಸಲ್ ಪಟ್ಟಿಯಲ್ಲಿದ್ದ 8 ನಕ್ಸಲರ ಪೈಕಿ ಇತ್ತೀಚೆಗೆ ವಿಕ್ರಂಗೌಡ ಎನ್ ಕೌಂಟರ್ ಆಗಿತ್ತು. ಉಳಿದ 7 ನಕ್ಸಲರಲ್ಲಿ 6 ನಕ್ಸಲರು ಸರ್ಕಾರಕ್ಕೆ ಶರಣಾಗಿದ್ದಾರೆ. ಆದರೆ ಏಕೈಕ ನಕ್ಸಲ್ ರವೀಂದ್ರ ಮಾತ್ರ ಇನ್ನೂ ಶರಣಾಗಿಲ್ಲ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮೂಲದ ರವೀಂದ್ರ ವಿರುದ್ಧ 14 ಕೇಸ್ ಗಳು ದಾಖಲಾಗಿವೆ. ನಕ್ಸಲ್ ಶರಣಾಗತಿ ಸಮಿತಿ ಸಂಪರ್ಕಕ್ಕೂ ಸಿಗದೇ ವರ್ಷಗಳಿಂದ ಭೂಗತನಾಗಿದ್ದಾನೆ ಎಂದು ತಿಳಿದುಬಂದಿದೆ.