alex Certify ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೆಸರಲ್ಲಿ ಮಹಿಳೆಗೆ 6 ಲಕ್ಷ ವಂಚನೆ ; ಆರೋಪಿ ಅರೆಸ್ಟ್.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೆಸರಲ್ಲಿ ಮಹಿಳೆಗೆ 6 ಲಕ್ಷ ವಂಚನೆ ; ಆರೋಪಿ ಅರೆಸ್ಟ್.!

ನವದೆಹಲಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ನಿರ್ಮಾಣ ಕಂಪನಿ ನಿರ್ಮಿಸುತ್ತಿರುವ ಚಿತ್ರದಲ್ಲಿ ಪಾತ್ರ ಕೊಡಿಸುವುದಾಗಿ ಹೇಳಿ  ಯುವತಿಗೆ  ಮೋಸ ಮಾಡಲು ಪ್ರಯತ್ನಿಸಿದ ಆರೋಪದ ಮೇಲೆ 29 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಅಮಿತಾಭ್ ಬಚ್ಚನ್ ಅವರ ಬಳಿ ಕೆಲಸ ಮಾಡಿದ ಛಾಯಾಗ್ರಾಹಕರೊಬ್ಬರನ್ನು ನೇಮಿಸಿಕೊಳ್ಳುವುದಾಗಿ ಹೇಳಿ ಆರೋಪಿಯು ತನ್ನ ಪೋರ್ಟ್ಫೋಲಿಯೊವನ್ನು ರಚಿಸಲು ಆಕೆಯಿಂದ 6 ಲಕ್ಷ ರೂ.ಗಳನ್ನು ಪಡೆಯಲು ಯತ್ನಿಸಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿ ರೋಹನ್ ಮೆಹ್ರಾ ಅಲಿಯಾಸ್ ಪ್ರಿನ್ಸ್ ಕುಮಾರ್ ಸಿನ್ಹಾ ಅವರನ್ನು ಮಂಗಳವಾರ ಸಂಜೆ ಜುಹು ಪ್ರದೇಶದ ಹೋಟೆಲ್ ನಿಂದ ಬಂಧಿಸಲಾಗಿದೆ.

28 ವರ್ಷದ   ಯುವತಿ  ಮತ್ತು ಆಕೆಯ ತಂದೆ ತಾವು ಮೋಸ ಹೋಗುತ್ತಿದ್ದೇವೆ ಎಂದು ಅರಿತುಕೊಂಡ ನಂತರ ಪೊಲೀಸರನ್ನು ಸಂಪರ್ಕಿಸಿದರು.ದೂರಿನ ಪ್ರಕಾರ, ಏಪ್ರಿಲ್ 3 ರಂದು ಮೆಹ್ರಾ ಅವರಿಂದ ಮಹಿಳೆಗೆ ಕರೆ ಬಂದಿದೆ.ಅಕ್ಷಯ್ ಕುಮಾರ್ ಅವರ ನಿರ್ಮಾಣ ಸಂಸ್ಥೆಯಾದ ಕೇಪ್ ಆಫ್ ಗುಡ್ ಫಿಲ್ಮ್ಸ್ ಪರವಾಗಿ ಮಾತನಾಡುತ್ತಿದ್ದೇನೆ ಎಂದು ವಂಚಿಸಲಾಗಿದೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...