ಕುಲ್ಲು: ಹಿಮಾಚಲ ಪ್ರದೇಶದಲ್ಲಿ ವರುಣಾರ್ಭಟ ಹೆಚ್ಚಾಗಿದ್ದು, ರಾಜ್ಯದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಭೂಕುಸಿತ ಮತ್ತು ಪ್ರವಾಹ ಉಂಟಾಗಿದೆ. ಹಲವಾರು ರಸ್ತೆಗಳು ಸಹ ಕೊಚ್ಚಿಹೋಗಿವೆ.ಭಾರಿ ಮಳೆಯಿಂದಾಗಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ.
ಹಿಮಾಚಲ ಪ್ರದೇಶದ ಕುಲ್ಲು ಮತ್ತು ಲಾಹೌಲ್ ಮತ್ತು ಸ್ಪಿಟಿ ಜಿಲ್ಲೆಗಳು ರಾಜ್ಯದ ಅತಿ ಹೆಚ್ಚು ಪೀಡಿತ ಪ್ರದೇಶಗಳಾಗಿವೆ. ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಈ ಪ್ರದೇಶದಲ್ಲಿ ಹಲವಾರು ಸೇತುವೆಗಳು ಹಾನಿಗೊಳಗಾಗಿವೆ.
ಧಾರಾಕಾರ ಮಳೆಯಿಂದಾಗಿ ಚಂಡೀಗಢ-ಮನಾಲಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವು ರಸ್ತೆಗಳನ್ನು ಮುಚ್ಚಲಾಗಿದೆ. ಲಾಹೌಲ್ ಮತ್ತು ಸ್ಪಿಟಿಯ ಚಂದ್ರತಾಲ್ ಮತ್ತು ಸೋಲನ್ ಜಿಲ್ಲೆಯ ಸಾಧುಪುಲ್ ಬಳಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ನೂರಾರು ಜನರು ಸಿಲುಕಿಕೊಂಡಿದ್ದಾರೆ.