ಈಗ ಪ್ರತಿಯೊಬ್ಬರ ಮನೆಗೂ ಗ್ಯಾಸ್ ಸಿಲಿಂಡರ್ ಲಗ್ಗೆಯಿಟ್ಟಿದೆ. ಅನೇಕರ ಮನೆಯಲ್ಲಿ ಅತಿ ಬೇಗ ಸಿಲಿಂಡರ್ ಮುಗಿದು ಹೋಗುತ್ತದೆ. ಇದ್ರಿಂದ ಹೆಚ್ಚುವರಿ ಹೊಣೆ ಬೀಳುತ್ತದೆ. ಕೆಲ ಎಚ್ಚರಿಕೆ ತೆಗೆದುಕೊಂಡಲ್ಲಿ ಸಿಲಿಂಡರ್ ಇನ್ನಷ್ಟು ಸಮಯ ಬರುವಂತೆ ಮಾಡಬಹುದು. ಗ್ಯಾಸ್ ಸಿಲಿಂಡರ್ ಉಳಿಸುವುದು ಮನೆಯ ಗೃಹಿಣಿ ಜವಾಬ್ದಾರಿ ಮಾತ್ರವಲ್ಲ. ಮನೆಯ ಪ್ರತಿಯೊಬ್ಬ ಸದಸ್ಯರ ಜವಾಬ್ದಾರಿಯಾಗಿದೆ.
ಅನ್ನ ಬೇಯಿಸುವ ಅರ್ಧ ಗಂಟೆ ಮೊದಲು ಅಕ್ಕಿಯನ್ನು ನೀರಿನಲ್ಲಿ ನೆನೆಸಿಡಿ. ಇದ್ರಿಂದ ಅನ್ನ ಬೇಗ ಬೇಯುತ್ತದೆ. ಅಡುಗೆ ಮಾಡಲು ನಿಮಗೆ ಹೆಚ್ಚು ಸಮಯ ಬೇಕಾಗುವುದಿಲ್ಲ.
ಅಡುಗೆ ಮಾಡುವ ವೇಳೆ ಎಲ್ಲ ಪದಾರ್ಥವನ್ನು ಹುಡುಕುವುದು ಸರಿಯಲ್ಲ. ಮೊದಲೇ ಎಲ್ಲ ಪದಾರ್ಥಗಳನ್ನು ಗ್ಯಾಸ್ ಬಳಿ ಇಟ್ಟುಕೊಳ್ಳಿ. ನಂತ್ರ ಅಡುಗೆ ಶುರು ಮಾಡಿದ್ರೆ ಸಮಯದ ಜೊತೆ ಗ್ಯಾಸ್ ಉಳಿಯುತ್ತದೆ.
ಬೋಗಣಿ, ನಾನ್ ಸ್ಟಿಕ್ ಪಾತ್ರೆಯಲ್ಲಿ ಅಡುಗೆ ಮಾಡುವ ಬದಲು ಕುಕ್ಕರ್ ನಲ್ಲಿ ಮಾಡಿದ್ರೆ ಇದ್ರಿಂದಲೂ ಗ್ಯಾಸ್ ಉಳಿಸಬಹುದು.
ಅಡುಗೆ ಮಾಡುವಾಗ ಬೇಕಾಗುವಷ್ಟೆ ನೀರನ್ನು ಹಾಕಿ. ಹೆಚ್ಚಿನ ನೀರನ್ನು ಹಾಕಿದ್ರೆ ಬೇಯಲು ಸಮಯ ತೆಗೆದುಕೊಳ್ಳುತ್ತದೆ. ಗ್ಯಾಸ್ ಹೆಚ್ಚು ಖಾಲಿಯಾಗುತ್ತದೆ.
ಯಾವುದೇ ಪದಾರ್ಥವನ್ನು ಮುಚ್ಚಿ ಬೇಯಿಸಿದ್ರೆ ಬೇಗ ಬೇಯುತ್ತದೆ. ಇದ್ರಿಂದ ಕಡಿಮೆ ಗ್ಯಾಸ್ ಸಾಕಾಗುತ್ತದೆ.