ನಾವು ಆಹಾರ ಸೇವಿಸಿದಾಗ ಪ್ಯಾಂಕ್ರಿಯಾಸ್ ಇನ್ಸುಲಿನ್ ಬಿಡುಗಡೆ ಮಾಡುತ್ತದೆ. ಆದರೆ ಹೆಚ್ಚೆಚ್ಚು ಸಕ್ಕರೆ ಸೇವಿಸಿದಾಗ ದೇಹವು ಇನ್ಸುಲಿನ್ಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸುತ್ತದೆ. ಆಗ ಪ್ಯಾಂಕ್ರಿಯಾಸ್ ಮತ್ತಷ್ಟು ಇನ್ಸುಲಿನ್ ಬಿಡುಗಡೆ ಮಾಡುತ್ತದೆ. ಇದು ಒತ್ತಡವನ್ನು ಹೆಚ್ಚಿಸಿ ಟೈಪ್ 2 ಡಯಾಬಿಟೀಸ್ಗೆ ಕಾರಣವಾಗಬಹುದಲ್ಲದೇ ಹೃದ್ರೋಗಕ್ಕೂ ಆಹ್ವಾನ ನೀಡಬಹುದು.
ಕಿಡ್ನಿ
ನಿಮಗೆ ಸಕ್ಕರೆ ಕಾಯಿಲೆ ಇದ್ದರೆ ಮೂತ್ರಪಿಂಡಗಳ ಹಾನಿಗೆ ಕಾರಣವಾಗಬಹುದು. ಮೂತ್ರಪಿಂಡಗಳು ರಕ್ತವನ್ನು ಫಿಲ್ಟರ್ ಮಾಡುತ್ತವೆ. ರಕ್ತದಲ್ಲಿ ಸಕ್ಕರೆಯ ಅಂಶ ಮಿತಿ ಮೀರಿದರೆ ಮೂತ್ರದಲ್ಲಿ ಹೆಚ್ಚುವರಿ ಸಕ್ಕರೆ ಬಿಡುಗಡೆಯಾಗಬಹುದು. ಇದರಿಂದ ಮೂತ್ರಪಿಂಡಕ್ಕೆ ಹಾನಿಯಾಗಬಹುದು.
ಲಿವರ್
ಸಕ್ಕರೆಯಲ್ಲಿರುವ ಫ್ರಕ್ಟೋಸ್ ಲಿವರ್ನಲ್ಲಿ ವಿಭಜನೆಯಾದಾಗ ಅದು ಕೊಬ್ಬಾಗಿ ರೂಪಾಂತರವಾಗುತ್ತದೆ. ಇದರಿಂದ ಫ್ಯಾಟಿ ಲಿವರ್ ಸಮಸ್ಯೆಯುಂಟಾಗಬಹುದು. ಅಲ್ಲದೇ ಇದು ಲಿವರ್ಗೆ ರಕ್ತದ ಪೂರೈಕೆಯನ್ನು ಕಡಿಮೆ ಮಾಡಬಹುದು. ಇದರಿಂದ ಯಕೃತ್ಗೆ ಹಾನಿಯಾಗಬಹುದು.
ಕೀಲು ನೋವು
ಯಥೇಚ್ಛವಾಗಿ ಸಕ್ಕರೆ ಸೇವಿಸುವುದರಿಂದ ಕೀಲುನೋವು ಉಲ್ಭಣವಾಗುತ್ತದೆ. ದೇಹದಲ್ಲಿ ಉರಿಯೂತದ ಸಮಸ್ಯೆ ಹೆಚ್ಚಾಗುತ್ತದೆ. ಇದರಿಂದ ರುಮಟೈಡ್ ಆರ್ಥರೈಟೀಸ್ ಕೂಡ ಬರಬಹುದು.
ಹಲ್ಲಿನ ಉಳುಕು
ಇತ್ತೀಚೆಗೆ ರೂಟ್ ಕೆನಾಲ್ ಮಾಡಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಲ್ಲು ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಪ್ರಮುಖ ಕಾರಣ ಎಲ್ಲರಲ್ಲೂ ಹೆಚ್ಚುತ್ತಿರುವ ಕಾಫಿ, ಜ್ಯೂಸ್, ಕೇಕ್, ಶೇಕ್ಸ್ಗಳ ಸೇವನೆ. ಈ ರೀತಿಯಾಗಿ ಮಿತಿ ಮೀರಿ ಸಕ್ಕರೆ ಸೇವಿಸಿದ್ರೆ ಹಲ್ಲಿನಲ್ಲಿ ಕ್ಯಾವಿಟಿಯಾಗಿ ದಂತಕ್ಷಯವಾಗಬಹುದು.