ಆಂಧ್ರಪ್ರದೇಶದ ಮಚಲಿಪಟ್ಟಣಂನಲ್ಲಿನ ವೈದ್ಯರ ನಿರ್ಲಕ್ಷ್ಯದಿಂದ ಮಕ್ಕಳು ಸಂಕಷ್ಟಕ್ಕೀಡಾಗಿದ್ದಾರೆ. ಸರ್ವಜನ್ ಸರ್ಕಾರಿ ಆಸ್ಪತ್ರೆಯಲ್ಲಿ ತಪ್ಪಾದ ಚುಚ್ಚುಮದ್ದನ್ನು ನೀಡಿದ್ದರಿಂದ ಆರು ಮಕ್ಕಳು ಅನಾರೋಗ್ಯಕ್ಕೆ ಒಳಗಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಂಕಿತರಲ್ಲಿ ನಾಲ್ಕು ಶಿಶುಗಳು ಮತ್ತು ಇಬ್ಬರು ಮಕ್ಕಳು ಸೇರಿದ್ದಾರೆ. 8 ತಿಂಗಳ ಗಾಯತ್ರಿ, 14 ತಿಂಗಳ ಪರ್ಧು, ಅಯಾನ್ (1), ಯೋಶಿತಾ ನಾಗ ಮಣಿಕಂಠ (1), ಮೊಹಮ್ಮದ್ ರೆಹಾನ್ (6), ವರ್ಷಿತಾ ಕೃಷ್ಣ (8) ಚಿಕಿತ್ಸೆ ಪಡೆಯುತ್ತಿದ್ದಾರೆ.
ವೈದ್ಯರು ಎಂದಿನಂತೆ ಚುಚ್ಚುಮದ್ದನ್ನು ನೀಡಿದ ಪರಿಣಾಮ ಅರ್ಧ ಗಂಟೆಯೊಳಗೆ, ಮಕ್ಕಳಲ್ಲಿ ತೀವ್ರ ಶೀತ ಮತ್ತು ಹೆಚ್ಚಿನ ಜ್ವರ ಸೇರಿದಂತೆ ಆತಂಕಕಾರಿ ರೋಗಲಕ್ಷಣಗಳು ಕಾಣಿಸಿಕೊಂಡವು. ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಪೀಡಿತ ಆರು ಮಕ್ಕಳನ್ನು ಹೆಚ್ಚಿನ ವೀಕ್ಷಣೆ ಮತ್ತು ಚಿಕಿತ್ಸೆಗಾಗಿ ತೀವ್ರ ನಿಗಾ ಘಟಕಕ್ಕೆ (ಐಸಿಯು) ವರ್ಗಾಯಿಸಿದ್ದಾರೆ.