ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ದೆಹಲಿ ಮತ್ತು ಎನ್‌ಸಿಆರ್ ವ್ಯಾಪ್ತಿಯಲ್ಲಿ ಎರಡು ಕಡೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.3 ಮತ್ತು 4.9 ರಷ್ಟು ತೀವ್ರತೆ ದಾಖಲಾಗಿದೆ.
ಪಶ್ಚಿಮ ನೇಪಾಳದಲ್ಲಿ ಕಳೆದ 24 ಗಂಟೆಗಳಲ್ಲಿ 3 ಕಂಪನಗಳ ನಂತರ 3 ಜನರು ಸಾವನ್ನಪ್ಪಿದ್ದಾರೆ. ನೇಪಾಳದಲ್ಲಿ ಪ್ರಬಲವಾದ 6.2 ಭೂಕಂಪದಿಂದ ಉಂಟಾದ ತೀವ್ರ ಕಂಪನಗಳು ಬುಧವಾರ ಮುಂಜಾನೆ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಡುಬಂದವು.
ನಸುಕಿನ 1.58ಕ್ಕೆ ಕಂಪನದ ಅನುಭವವಾಗಿದೆ. ಭೂಕಂಪನದ ಕೇಂದ್ರಬಿಂದುವನ್ನು ನೇಪಾಳದ ಗಡಿಯಲ್ಲಿರುವ ಉತ್ತರಾಖಂಡದ ಪಿಥೋರಗಢ್‌ನಿಂದ 90 ಕಿಮೀ ಆಗ್ನೇಯದಲ್ಲಿ ಭೂಕಂಪನದ ಕೇಂದ್ರಬಿಂದು ಕಂಡು ಬಂದಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ತಿಳಿಸಿದೆ.
ದೆಹಲಿ ವ್ಯಾಪ್ತಿಯಲ್ಲಿ ಮಾತ್ರವಲ್ಲದೇ, ನೋಯ್ಡಾ, ಗಾಜಿಯಾಬಾದ್ ನಲ್ಲೂ ಭೂಕಂಪ ಸಂಭವಿಸಿದ್ದು, ಜನ ಸಾಮಾಜಿಕ ಜಾಲತಾಣಗಳಲ್ಲಿ ಅನುಭವ ಹಂಚಿಕೊಂಡಿದ್ದಾರೆ.