ತನ್ನ ಹಿಂಬದಿಯಲ್ಲಿ 6 ಸೆಂಟಿಮೀಟರ್ ಉದ್ದದ ಬಾಲ ಹೊಂದಿರುವ ಅಪರೂಪದ ಹೆಣ್ಣು ಮಗುವೊಂದು ಬ್ರೆಜಿಲ್ ನ ಸಾವೋಪೌಲದಲ್ಲಿ ಜನಿಸಿದ್ದು ಬಳಿಕ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಅದನ್ನು ತೆಗೆದು ಹಾಕಿದ್ದಾರೆ.
ಶಸ್ತ್ರಚಿಕಿತ್ಸೆ ಬಳಿಕ ಉಂಟಾದ ರಂಧ್ರವನ್ನು ವೈದ್ಯರು ಈಗ ಮುಚ್ಚಿದ್ದು ಮಗು ಚೇತರಿಸಿಕೊಳ್ಳುತ್ತಿದೆ ಎಂದು ಹೇಳಲಾಗಿದೆ. ಬೆನ್ನು ಮೂಳೆಯಲ್ಲಿನ ಬೆಳವಣಿಗೆಯಲ್ಲಿ ವ್ಯತ್ಯಾಸವಾದರೆ ಇಂತಹ ನ್ಯೂನ್ಯತೆಗಳು ಕಂಡುಬರುತ್ತವೆ ಎಂದು ವೈದ್ಯರು ಹೇಳಿದ್ದಾರೆ.
ಇದು ಬಾಲದಂತೆ ಕಂಡರೂ ಸಹ ಗಡ್ಡೆ ರೂಪದಲ್ಲಿ ಇರುತ್ತದೆ ಎಂದು ವೈದ್ಯರು ತಿಳಿಸಿದ್ದು, ಇದನ್ನು ತೆಗೆದು ಹಾಕದೆ ಹಾಗೆಯೇ ಬಿಟ್ಟಲ್ಲಿ ಮುಂದಿನ ದಿನಗಳಲ್ಲಿ ಮಗುವಿಗೆ ಅಪಾಯ ಸಂಭವಿಸುವ ಸಾಧ್ಯತೆ ಇತ್ತು ಎಂದು ಹೇಳಿದ್ದಾರೆ. ಇದೀಗ ಮಗು ಆರೋಗ್ಯವಾಗಿದೆ ಎಂದು ಮಾಹಿತಿ ನೀಡಿದ್ದಾರೆ.