
ಹಾಸಿಗೆ ಮೇಲೆ ತಂಗಿ ಬರೆಯುತ್ತಾ ಕುಳಿತಿರುತ್ತಾಳೆ. ಅಕ್ಕ ಬಾಗಿಲು ತೆಗೆದು ಒಳಬರ್ತಿದ್ದಂತೆ ಆಕೆಯನ್ನು ನೋಡಿದ ತಂಗಿ ಒಂದು ಕ್ಷಣ ಜೋರಾಗಿ ಕಿರುಚಿ ಮೌನಕ್ಕೆ ಜಾರುತ್ತಾಳೆ. ನಂತರ ಅಕ್ಕ ಮುಂಬೆ ಬರ್ತಿದ್ದಂತೆ, ಹಾಸಿಗೆಯಿಂದ ಮೇಲೆದ್ದು ಬಂದ ತಂಗಿ, ಜಿಗಿದು ಅಕ್ಕನನ್ನು ಪ್ರೀತಿಯಿಂದ ಗಟ್ಟಿಯಾಗಿ ತಬ್ಬಿಕೊಳ್ಳುತ್ತಾಳೆ. ಈ ಕ್ಷಣ ಭಾವನಾತ್ಮಕ ತಿರುವನ್ನು ತೆಗೆದುಕೊಳ್ಳುತ್ತವೆ.
ಇಬ್ಬರೂ ದೀರ್ಘಕಾಲ ಬೆಚ್ಚಗಿನ ಅಪ್ಪುಗೆಯಲ್ಲಿ ಮುಳುಗುತ್ತಾರೆ. ವಿಡಿಯೋ ಕ್ಲಿಪ್ ಮುಗಿಯುವವರೆಗೂ ಒಡಹುಟ್ಟಿದವರು ಒಬ್ಬರನ್ನೊಬ್ಬರು ಬಿಡುವುದಿಲ್ಲ. ವಿಡಿಯೋ ಹಂಚಿಕೊಂಡಿರುವ ಟ್ವಿಟ್ಟರ್ ಬಳಕೆದಾರರು ಸುಮಾರು 6 ತಿಂಗಳ ಕಾಲ ಅಕ್ಕನಿಂದ ಪ್ರತ್ಯೇಕವಾಗಿದ್ದ ನಂತರ ಕಿರಿಯ ಸಹೋದರಿಯನ್ನು ನೋಡಿ ಸಂಪೂರ್ಣವಾಗಿ ಆಶ್ಚರ್ಯಚಕಿತರಾದರು ಎಂದು ಬಹಿರಂಗಪಡಿಸಿದ್ದಾರೆ.
— Ovenhead. (@Sylviakabhoot) December 6, 2022