ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾದ ಸ್ಮರಣಿಕೆಗಳು ಮತ್ತು ಉಡುಗೊರೆಗಳ ಐದನೇ ಸುತ್ತಿನ ಇ-ಹರಾಜು ಅಕ್ಟೋಬರ್ 31 ರಂದು ಮುಕ್ತಾಯಗೊಳ್ಳಲಿದೆ.
ಸಂಸ್ಕೃತಿ ಸಚಿವಾಲಯವು ಇ-ಹರಾಜು ಕಾರ್ಯಕ್ರಮವನ್ನು ನಡೆಸುತ್ತಿದ್ದು, ಪ್ರಧಾನ ಮಂತ್ರಿಗಳು ಸ್ವೀಕರಿಸಿದ ಉಡುಗೊರೆಗಳು ಮತ್ತು ಸ್ಮರಣಿಕೆಗಳ ಭವ್ಯವಾದ ಶ್ರೇಣಿಯನ್ನು ಪ್ರದರ್ಶಿಸುತ್ತದೆ.
ಇ-ಹರಾಜು ದೇಶದ ಶ್ರೀಮಂತ ಪರಂಪರೆಯನ್ನು ಪ್ರದರ್ಶಿಸುವ ಕಲಾಕೃತಿಗಳ ಅಸಾಧಾರಣ ಸಂಗ್ರಹವನ್ನು ಒಳಗೊಂಡಿದೆ. ನವದೆಹಲಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಂಸ್ಕೃತಿ ಖಾತೆ ರಾಜ್ಯ ಸಚಿವರಾದ ಮೀನಾಕ್ಷಿ ಲೇಖಿ, ಇ-ಹರಾಜು ವೇಗ ಪಡೆಯುತ್ತಿದೆ. ಈ ಇ-ಹರಾಜು ಯಶಸ್ವಿ ಹರಾಜಿನ ಸರಣಿಯಲ್ಲಿ ಐದನೇ ಆವೃತ್ತಿಯಾಗಿದೆ ಎಂದು ಹೇಳಿದ್ದಾರೆ.
ಮೊದಲನೆಯ ಹರಾಜು 2019 ರಲ್ಲಿ ನಡೆಯಿತು. ಐದನೇ ಇ-ಹರಾಜಿಗೆ 912 ಐಟಂಗಳಿವೆ. ಕಳೆದ 4 ಇ-ಹರಾಜಿನಲ್ಲಿ 7 ಸಾವಿರಕ್ಕೂ ಹೆಚ್ಚು ವಸ್ತುಗಳನ್ನು ಇ-ಹರಾಜಿನಲ್ಲಿ ಇಡಲಾಗಿದೆ. ಈ ಹರಾಜಿನ ಮೂಲಕ ಸಂಗ್ರಹವಾಗುವ ಹಣವನ್ನು ಗಂಗಾ ನದಿಯನ್ನು ಸಂರಕ್ಷಿಸುವ ಮತ್ತು ಮರುಸ್ಥಾಪಿಸುವ ಉದಾತ್ತ ಉದ್ದೇಶಕ್ಕೆ ಕೊಡುಗೆ ನೀಡಲಾಗುವುದು ಎಂದು ಹೇಳಿದ್ದಾರೆ.