ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 5G ತರಂಗಾಂತರ ಹರಾಜಿಗೆ ಈಗಾಗಲೇ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ 5G ಸೇವೆ ದೇಶದಲ್ಲಿ ಯಾವಾಗ ಆರಂಭವಾಗಲಿದೆ ಎಂಬ ಪ್ರಶ್ನೆಗೆ ಈಗ ಕೇಂದ್ರ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಉತ್ತರ ನೀಡಿದ್ದಾರೆ.
ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ದೇಶದ 25 ನಗರಗಳು ಮತ್ತು ಪಟ್ಟಣಗಳಲ್ಲಿ ಈ ವರ್ಷಾಂತ್ಯದ ವೇಳೆಗೆ 5G ಸೇವೆ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.
ವಿಶ್ವದಲ್ಲಿಯೇ ಭಾರತದಲ್ಲಿ ಅತಿ ಕಡಿಮೆ ದರಕ್ಕೆ ಡೇಟಾ ಸಿಗುತ್ತಿದೆ ಎಂದ ಅವರು, ಜಾಗತಿಕವಾಗಿ 1ಜಿಬಿ ಡೇಟಾ ದರ 25 ಡಾಲರ್ ಇದ್ದರೆ ಭಾರತದಲ್ಲಿ 1ಜಿಬಿ ಡೇಟಾ ದರ 2 ಡಾಲರ್ ಮಾತ್ರ ಎಂದು ಹೇಳಿದರು. G ಸೇವೆ ಪ್ರಸ್ತುತ ಇರುವ 4G ಸೇವೆಗಿಂತ ಹತ್ತುಪಟ್ಟು ವೇಗ ಇರಲಿದೆ ಎಂದು ಹೇಳಲಾಗಿದೆ.