ಇಂಟರ್ನೆಟ್ ವೇಗದ ಕುರಿತು ಗೊಣಗಾಡುತ್ತಿದ್ದವರಿಗೆ ಖುಷಿ ಸುದ್ದಿಯೊಂದು ಇಲ್ಲಿದೆ. ಬಹುನಿರೀಕ್ಷಿತ 5ಜಿ ಸೇವೆಗೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಚಾಲನೆ ನೀಡುತ್ತಿದ್ದು, ಮೊಬೈಲ್ ಬಳಕೆದಾರರು ಸಂತಸಗೊಂಡಿದ್ದಾರೆ.
5ಜಿ ಸೇವೆ ಆರಂಭದ ಬಳಿಕ ಕಾಲ್ ಡ್ರಾಪ್ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎನ್ನಲಾಗುತ್ತಿದ್ದು, ಜೊತೆಗೆ ಅತಿ ವೇಗದ ಇಂಟರ್ನೆಟ್ ಲಭ್ಯವಾಗಲಿದೆ. 5ಜಿ ಸ್ಪೆಕ್ಟ್ರಮ್ ಹರಾಜು ಈಗಾಗಲೇ ಪೂರ್ಣಗೊಂಡಿದ್ದು, ಸೇವೆ ಆರಂಭವಷ್ಟೇ ಬಾಕಿ ಉಳಿದಿತ್ತು.
ದೇಶದ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಭಾರತಿ ಏರ್ಟೆಲ್, ವೊಡಾಫೋನ್ – ಐಡಿಯಾ ಜೊತೆಗೆ ಗೌತಮ್ ಅದಾನಿಯವರ ಕಂಪನಿಯೂ ಸಹ 5ಜಿ ಸ್ಪೆಕ್ಟ್ರಮ್ ಹರಾಜಿನಲ್ಲಿ ಪಾಲ್ಗೊಂಡಿದ್ದು ಗಮನಾರ್ಹ. ಹೀಗಾಗಿ ಗ್ರಾಹಕರಿಗೆ ಪೈಪೋಟಿ ದರದಲ್ಲಿ 5 ಜಿ ಸೇವೆ ಸಿಗುವ ಸಾಧ್ಯತೆ ಇದೆ.