ಮನುಷ್ಯನಲ್ಲಿ ಮಾನವೀಯತೆ ಅಳಿಸಿ ಹೋಗಿದೆ ಎನ್ನುವುದಕ್ಕೆ ಮತ್ತೊಂದು ನಿದರ್ಶನ ಎನ್ನುವಂತೆ ವಿಶ್ವದ ಶ್ರೀಮಂತ ನಗರ ನ್ಯೂಯಾರ್ಕ್ ನಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ.
ನ್ಯೂಯಾರ್ಕ್ ನಗರದ ಸಬ್ ವೇ ನಿಲ್ದಾಣದಲ್ಲಿ 57 ವರ್ಷದ ಮಹಿಳೆಯೊಬ್ಬರ ತಲೆಗೆ ಸುತ್ತಿಗೆಯಿಂದ ಹಲವಾರು ಬಾರಿ ಹೊಡೆದ ನಂತರ ದರೋಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಮಹಿಳೆಯ ಮೇಲೆ ಹಲವಾರು ಬಾರಿ ಸುತ್ತಿಗೆಯಿಂದ ಹೊಡೆದು ಆಕೆಯ ಪರ್ಸ್ ಅನ್ನು ಕದ್ದು, ಓಡಿಹೋದ ಶಂಕಿತನನ್ನು ಪೊಲೀಸರು ಹುಡುಕುತ್ತಿದ್ದಾರೆ ಎಂದು ನ್ಯೂಯಾರ್ಕ್ ಪೊಲೀಸ್ ಇಲಾಖೆಯ ಡಿಟೆಕ್ಟಿವ್ ಮುಖ್ಯಸ್ಥ ಜೇಮ್ಸ್ ಎಸ್ಸಿಗ್ ಅವರು ಶುಕ್ರವಾರ ಮಧ್ಯಾಹ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ನು ಸಂತ್ರಸ್ತ ಮಹಿಳೆಯನ್ನು ನೀನಾ ರಾಥ್‌ಸ್ಚೈಲ್ಡ್ ಎಂದು ಗುರುತಿಸಲಾಗಿದೆ. ನೀನಾ, ನ್ಯೂಯಾರ್ಕ್ ನಗರದ ಆರೋಗ್ಯ ಇಲಾಖೆಯಲ್ಲಿ ವಿಜ್ಞಾನಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಳು ಎಂದು ಆಕೆಯ ಕುಟುಂಬದವರು ತಿಳಿಸಿದ್ದಾರೆ. ಕೆಲಸದಿಂದ ಹೊರಟ 15 ನಿಮಿಷಗಳ ನಂತರ ಆಕೆಯ ಮೇಲೆ ದಾಳಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
WAR BREAKING: ಉಕ್ರೇನ್ ನಿರಾಶ್ರಿತರ ಸಂಖ್ಯೆ 3,68,000ಕ್ಕೆ ಏರಿಕೆ; IJF ಗೌರವಾಧ್ಯಕ್ಷ ಸ್ಥಾನದಿಂದ ಪುಟಿನ್ ಸಸ್ಪೆಂಡ್
ಗುರುವಾರ ರಾತ್ರಿ 11 ಗಂಟೆಗೆ ಕಪ್ಪು ಜಾಕೆಟ್, ನೀಲಿ ಜೀನ್ಸ್ ಧರಿಸಿ ಸುತ್ತಿಗೆಯನ್ನು ಹಿಡಿದಿದ್ದ, ಆರು ಅಡಿ ಎತ್ತರದ ಪುರುಷ, ಮಹಿಳೆಯ ಮೇಲೆ ದಾಳಿ ನಡೆಸಿದ್ದಾನೆಂದು ಪೊಲೀಸ್ ಇಲಾಖೆ ತಿಳಿಸಿದೆ. ಇಡೀ ಘಟನೆ ಅಪ್ರಚೋದಿತ ಎಂದಿರುವ ಡಿಟೆಕ್ಟಿವ್ ಮುಖ್ಯಸ್ಥ ಎಸ್ಸಿಗ್, ಇದು ಅತ್ಯಂತ ಕ್ರೂರ ಹಾಗೂ ಭಯಾನಕ ಅಪರಾಧ ಎಂದಿದ್ದಾರೆ.
ಇನ್ನು ಭೀಕರ ದಾಳಿಯ ನಂತರ, ನೀನಾ ಮೆದುಳಿನಿಂದ ರಕ್ತಸ್ರಾವವಾಗುತ್ತಿತ್ತು. ಸುತ್ತಿಗೆಯಿಂದ ಹೊಡೆದಿರುವ ರಭಸಕ್ಕೆ ಆಕೆಯ ತಲೆಬುರುಡೆ ಮುರಿದಿದೆ. ಅವಳ ಮುಖದ ಮೇಲೂ ಸಾಕಷ್ಟು ಗಾಯಗಳಾಗಿವೆ. ತಕ್ಷಣ ಆಕೆಯನ್ನು ಕಾರ್ನೆಲ್ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಮುಂದುವರೆಯುತ್ತಿದೆ ಎಂದು ಎಸ್ಸಿಗ್ ಹೇಳಿದ್ದಾರೆ.