ಶ್ರೀನಗರ: ಕಣಿವೆ ರಾಜ್ಯ ಶ್ರೀನಗರದಲ್ಲಿ ಭಾನುವಾರ ನಡೆದ ಸರಳ ಸಮಾರಂಭದಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ 55 ಕ್ಕೂ ಹೆಚ್ಚು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಕಾಶ್ಮೀರದಲ್ಲಿ ನಡೆದ ಅತಿದೊಡ್ಡ ಕಾರ್ಯಕ್ರಮವಾಗಿದೆ ಎಂದು ಸಮಾರಂಭದ ಆಯೋಜಕರಾದ ಜಾಫ್ರಿ ಕೌನ್ಸಿಲ್ ಹೇಳಿದ್ದಾರೆ.
ಶ್ರೀನಗರದ ಅಮರ್ ಸಿಂಗ್ ಕ್ಲಬ್ ನಲ್ಲಿ ನಡೆದ ಸಮಾರಂಭಕ್ಕೆ ಹಲವಾರು ಮಂದಿ ಸಾಕ್ಷಿಯಾಗಿದ್ದಾರೆ. ಕೌನ್ಸಿಲ್ ಈ ಹಿಂದೆಯೂ ಇಂತಹ ಕಾರ್ಯಗಳನ್ನು ನಡೆಸಿದೆ. ಆದರೆ, ಈ ವರ್ಷ ಮಾತ್ರ ಅತಿ ಹೆಚ್ಚು ಜೋಡಿಗಳ ವಿವಾಹವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಮತ್ತೆ ವಿಶ್ವಕ್ಕೆ ಕಂಟಕವಾಗಲಿದೆ ಚೀನಾ….? ಮಾರುಕಟ್ಟೆಯಲ್ಲಿ ಸಿಕ್ಕಿದೆ 18 ಅಪಾಯಕಾರಿ ವೈರಸ್….!
ಜೋಡಿಗಳು ಸಂಸ್ಥೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುತ್ತಾರೆ. ಅವರ ರುಜುವಾತುಗಳು ಮತ್ತು ಇತರ ವಿವರಗಳನ್ನು ಪರಿಶೀಲಿಸಿದ ನಂತರ, ಕೌನ್ಸಿಲ್ ಅವರ ಮದುವೆಗೆ ವ್ಯವಸ್ಥೆಗಳನ್ನು ಮಾಡುತ್ತದೆ. ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಮಾತ್ರ ಇಲ್ಲಿ ವಿವಾಹವನ್ನು ಏರ್ಪಡಿಸಲಾಗುತ್ತದೆ. ಜೋಡಿಗಳ ಪೂರ್ವಾಪರಗಳನ್ನು ಪರಿಶೀಲಿಸಿಯೇ ಮದುವೆ ಮಾಡಲಾಗುತ್ತದೆ.