ಪ್ರೀತಿಗೆ ವಯಸ್ಸು, ಜಾತಿಯ ಹಂಗಿಲ್ಲ ಅನ್ನೋ ಮಾತಿದೆ. ಇದಕ್ಕೆ ತಾಜಾ ಉದಾಹರಣೆ ಪಾಕಿಸ್ತಾನದ ನವ ದಂಪತಿ. 18 ವರ್ಷದ ಯುವತಿಯೊಬ್ಬಳು 55 ವರ್ಷದ ವ್ಯಕ್ತಿಯನ್ನು ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ. ಈ ವಿವಾಹ ಎರಡೂ ಕುಟುಂಬದವರಿಗೆ ದಿಗ್ಭ್ರಮೆ ಉಂಟುಮಾಡಿದೆ.
ಆಸಕ್ತಿದಾಯಕ ಸಂಗತಿಯೆಂದರೆ ಸಂಗೀತ ಇವರಿಬ್ಬರನ್ನು ಒಂದು ಮಾಡಿದೆ. ಅದರಲ್ಲೂ ಬಾಲಿವುಡ್ ನಟ ಬಾಬಿ ಡಿಯೋಲ್ ಅವರ ಹಾಡುಗಳ ಮೂಲಕ ಮುಸ್ಕಾನ್ ಹಾಗೂ ಫಾರೂಕ್ ಮಧ್ಯೆ ಪ್ರೀತಿ ಚಿಗುರೊಡೆದಿದೆ. ಮುಸ್ಕಾನ್ ಹಾಗೂ ಫಾರೂಕ್ ಮನೆ ಸಮೀಪದಲ್ಲೇ ಇತ್ತು. ಸಂಗೀತವನ್ನು ಇಷ್ಟಪಡ್ತಾ ಇದ್ದ ಮುಸ್ಕಾನ್, ಉತ್ತಮ ಹಾಡುಗಾರ್ತಿ.
ಫಾರೂಕ್ ಗೆ ಕೂಡ ಸಂಗೀತ ಅಚ್ಚುಮೆಚ್ಚು. ಫಾರೂಕ್ ಆಗಾಗ ಮುಸ್ಕಾನ್ ಮನೆಗೆ ಬರುತ್ತಿದ್ದ. ತನ್ನನ್ನು ಆತ ಇಷ್ಟಪಡ್ತಾನೆ ಅನ್ನೋದು ಮುಸ್ಕಾನ್ಗೆ ಖಚಿತವಾಗಿತ್ತು. ಆಕೆಗೂ ಫಾರೂಕ್ ಮೇಲೆ ಮನಸ್ಸಿತ್ತು. ಹಾಗಾಗಿಯೇ ಆತನಿಗಾಗಿ ಬಾಬಿ ಡಿಯೋಲ್ ರ ʼಬಾದಲ್ನ ನಾ ಮಿಲೋ ಹಮ್ಸೆ ಜ್ಯಾದಾʼ ಹಾಡನ್ನು ಹಾಡುತ್ತಿದ್ಲು.
ಕೊನೆಗೆ ಮುಸ್ಕಾನ್ ಮೊದಲು ಪ್ರಪೋಸ್ ಮಾಡಿದ್ದಾಳಂತೆ. ಆಕೆಯ ಹಾಡುಗಾರಿಕಯನ್ನು ಇಷ್ಟಪಡುತ್ತಿದ್ದ ತನಗೆ ಕ್ರಮೇಣ ಅವಳ ಮೇಲೆ ಪ್ರೀತಿ ಹುಟ್ಟಿತು ಅಂತಾ ಫಾರೂಕ್ ಹೇಳಿಕೊಂಡಿದ್ದಾನೆ. ಫಾರೂಕ್ ಮಾತಿನ ಶೈಲಿಯಿಂದ ತಾನು ತುಂಬಾ ಪ್ರಭಾವಿತನಾಗಿದ್ದೇನೆ ಅಂತಾ ಮುಸ್ಕಾನ್ ಹೇಳಿದ್ದಾಳೆ. ಇಬ್ಬರ ಕುಟುಂಬ ಮತ್ತು ಸ್ನೇಹಿತರು ಈ ಮದುವೆಯನ್ನು ವಿರೋಧಿಸಿದ್ರು. ಆದರೂ ಮುಸ್ಕಾನ್ ಹಾಗೂ ಫಾರೂಕ್ ಇಷ್ಟಪಟ್ಟು ಮದುವೆಯಾಗಿದ್ದಾರೆ. ಇದು ಫಾರೂಕ್ಗೆ ಮೊದಲ ಮದುವೆ. ಪರಸ್ಪರರಿಗಾಗಿ ಎಂಥಾ ತ್ಯಾಗಕ್ಕೂ ಸಿದ್ಧ ಎನ್ನುತ್ತಿದ್ದಾರೆ. ಯುಟ್ಯೂಬರ್ ಒಬ್ಬರು ಈ ದಂಪತಿಯ ಸಂದರ್ಶನ ಕೂಡ ಮಾಡಿದ್ದಾರೆ.