ಮೆದುಳು ಟಿಬಿ ಎಂಬ ಅಪರೂಪದ ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ 53 ವರ್ಷದ ವ್ಯಕ್ತಿಯೊಬ್ಬರಿಗೆ ದೆಹಲಿ ವೈದ್ಯರು ಯಶಸ್ವಿ ಚಿಕಿತ್ಸೆ ನಡೆಸಿದ್ದಾರೆ. ಸಾಮಾನ್ಯವಾಗಿ ಬ್ರೈನ್ ಟ್ಯೂಮರ್ ಕಾಯಿಲೆಗೆ ಔಷಧಿಗಳನ್ನು ನೀಡಲಾಗುತ್ತದೆ. ಆದರೆ ಶಾಲಿಮಾರ್ ಬಾಗ್ ಅವರ ಕೇಸ್ನಲ್ಲಿ, ಅವರ ಮೆದುಳಿನಲ್ಲಿದ್ದ ಟ್ಯೂಮರ್ ಗಾತ್ರ ದೊಡ್ಡದಾಗಿದ್ದ ಕಾರಣ ಶಸ್ತ್ರ ಚಿಕಿತ್ಸೆ ಮಾಡಲಾಯಿತು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಅಂದಹಾಗೇ ಶಾಲಿಮಾರ್ ಬಾಗ್ ಅವರ ಶಸ್ತ್ರಚಿಕಿತ್ಸೆ ದೆಹಲಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ನಡೆದಿದೆ. ಕಳೆದ ವರ್ಷ ಅವರಲ್ಲಿ ಬ್ರೈನ್ ಟ್ಯೂಮರ್ ಕಾಯಿಲೆ ಇರುವ ಬಗ್ಗೆ ತಿಳಿದು ಬಂದಿತು. ಇದನ್ನು ಬ್ರೈನ್ ಟಿಬಿ ಎಂದ ವೈದ್ಯರು ಸಾಕಷ್ಟು ಮಾತ್ರೆಗಳನ್ನು ನೀಡಿದರು. ಆದರೆ ಅವರ ಮೆದುಳಿನಲ್ಲಿದ್ದ ಟ್ಯೂಮರ್ ಬೆಳೆಯುತ್ತಲೆ ಇತ್ತು. ಐದು ತಿಂಗಳಾದರು ಟ್ಯೂಮರ್ ಬೆಳವಣಿಗೆ ನಿಂತಿರಲಿಲ್ಲ.
ದಿನ ಕಳೆದಂತೆ ಶಾಲಿಮಾರ್ ಅವರ ಸ್ಥಿತಿ ಹದಗೆಡತೊಡಗಿತು. ದೇಹದ ಸಂಪೂರ್ಣ ಸ್ವಾಧೀನ ಕಳೆದುಕೊಂಡ ಅವರಿಗೆ ತಲೆಬೇನೆ ಕೂಡ ಹೆಚ್ಚಾಗ ತೊಡಗಿತು. ಪ್ರತಿದಿನ ಔಷಧಿ ತೆಗದುಕೊಂಡರು ಅವರ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಆಗದೆ ಅವರ ಸ್ಥಿತಿ ಹದಗೆಟ್ಟ ಮೇಲೆ, ಅವರನ್ನು ಫೋರ್ಟಿಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು.
BIG NEWS: ಈ ವರ್ಷ ತೆರಿಗೆ ಹೆಚ್ಚಳವಿಲ್ಲ; ಸಿಎಂ ಘೋಷಣೆ
ತಕ್ಷಣ ಎಂಆರ್ಐ ಬ್ರೈನ್ ಸ್ಕ್ಯಾನ್ ಮಾಡಿದ ಫೋರ್ಟಿಸ್ ವೈದ್ಯರು, ಸ್ಕ್ಯಾನ್ ರಿಸಲ್ಟ್ ನೋಡಿ ಆತಂಕಗೊಂಡರು. ಕಾರಣ ಮೆದುಳಿನಲ್ಲಿದ್ದ ಟ್ಯೂಮರ್ ತುಂಬಾ ದೊಡ್ಡದಾಗಿ ಬೆಳೆದಿತ್ತು. ಅದನ್ನು ಔಷಧಿಗಳ ಮೂಲಕ ಕರಗಿಸಲು ಸಾಧ್ಯವಿಲ್ಲ ಎಂದ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲು ನಿರ್ಧರಿಸಿದರು. ಸಣ್ಣಮೆದುಳು ಎಂದು ಕರೆಯಲ್ಪಡುವ ಸೆರಬೆಲ್ಲಮ್ ಅನ್ನು ರಕ್ತಕಣಗಳಿಂದ ಕೂಡಿದ್ದ ಟ್ಯೂಮರ್ ಸಂಪೂರ್ಣವಾಗಿ ಆವರಿಸಿಕೊಂಡಿತ್ತು ಎಂದು ವೈದ್ಯರು ತಿಳಿಸಿದ್ದಾರೆ.
ಟ್ಯೂಮರ್ ಅನ್ನು ತಕ್ಷಣವೇ ತೆಗೆದುಹಾಕಲಾಯಿತು. ಕೆಲವು ದಿನಗಳ ಕಾಲ ಟ್ಯೂಮರ್ ತೆಗೆಯದೇ ಹಾಗೇ ಬಿಟ್ಟಿದ್ದರೆ, ರೋಗಿಯು ಕೋಮಾಗೆ ಹೋಗಿರುತ್ತಿದ್ದರು. ಇಲ್ಲವೇ ಕೈಕಾಲು ದೌರ್ಬಲ್ಯಗೊಂಡು, ಮೆದುಳಿನಲ್ಲಿ ದ್ರವದ ಸಂಗ್ರಹವಾಗುತ್ತಿತ್ತು ಅಥವಾ ಅವರ ಸಾವಿಗು ಕಾರಣವಾಗುತ್ತಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಇದೇ ವೇಳೆ ಮತ್ತೊಂದು ಮಾಹಿತಿ ನೀಡಿರುವ ವೈದ್ಯರು, ಶಾಲಿಮಾರ್ ಅವರಲ್ಲಿ ಬ್ರೈನ್ ಟಿಬಿ ಇರಲಿಲ್ಲ. ಅದಕ್ಕಿಂತ ಅಪಾಯಕಾರಿಯಾದ ಹೆಮಾಂಜಿಯೋಬ್ಲಾಸ್ಟೊಮಾದಿಂದ ಬಳಲುತ್ತಿದ್ದಾರೆ, ಇದು ಅಪರೂಪ ರೀತಿಯ ವ್ಯಾಸ್ಕುಲರ್ ಟ್ಯೂಮರ್ ಎಂದಿದ್ದಾರೆ.