ಪ್ರತಿನಿತ್ಯ 1 ಪ್ಯಾಕ್ ಸಿಗರೇಟ್ ಸೇದುತ್ತಿದ್ದ ವ್ಯಕ್ತಿಯ ಗಂಟಲಿನಲ್ಲಿ ಕೂದಲು ಬೆಳೆದಿದ್ದು ಬೆಚ್ಚಿಬೀಳಿಸಿದೆ. ಅಮೇರಿಕನ್ ಜರ್ನಲ್ ಆಫ್ ಕೇಸ್ ರಿಪೋರ್ಟ್ಸ್ ವರದಿ ಮಾಡಿರುವಂತೆ 52 ವರ್ಷ ವಯಸ್ಸಿನ ಆಸ್ಟ್ರಿಯಾದ ವ್ಯಕ್ತಿಯೊಬ್ಬರು ಪ್ರತಿನಿತ್ಯ ಒಂದು ಪ್ಯಾಕ್ ಸಿಗರೇಟ್ ಸೇದುತ್ತಿದ್ದರು. ಪರಿಣಾಮ ಅವರ ಗಂಟಲಿನೊಳಗೆ ಅಪರೂಪವೆಂಬಂತೆ ಕೂದಲು ಬೆಳೆದಿದೆ. ದೀರ್ಘಾವಧಿಯ ಧೂಮಪಾನದಿಂದ ಇಂತಹ ಅನಿರೀಕ್ಷಿತ ಮತ್ತು ಕೆಲವೊಮ್ಮೆ ಗಂಭೀರ ತೊಡಕುಗಳು ಕಾಣಿಸಿಕೊಳ್ಳುತ್ತವೆ ಎಂದಿದೆ.
ಪ್ರತಿನಿತ್ಯ ಧೂಮಪಾನ ಮಾಡುತ್ತಿದ್ದ ಆ ವ್ಯಕ್ತಿ 2007 ರಲ್ಲಿ ಮೊದಲ ಬಾರಿಗೆ ಕರ್ಕಶ ಧ್ವನಿ, ಉಸಿರಾಟದ ತೊಂದರೆ ಮತ್ತು ಕೆಮ್ಮು ಕಡಿಮೆಯಾಗದ ಕಾರಣ ವೈದ್ಯರನ್ನು ಸಂಪರ್ಕಿಸಿದರು. ಬ್ರಾಂಕೋಸ್ಕೋಪ್‌ನೊಂದಿಗಿನ ಪರೀಕ್ಷೆಯ ಸಮಯದಲ್ಲಿ, ವೈದ್ಯರು ಉರಿಯೂತ ಮತ್ತು ಆಶ್ಚರ್ಯಕರವಾಗಿ ಅವನ ಗಂಟಲಿನಲ್ಲಿ ಹಲವಾರು ಕೂದಲುಗಳು ಬೆಳೆಯುತ್ತಿರುವುದನ್ನು ಕಂಡುಹಿಡಿದರು.
ವಿಶೇಷವಾಗಿ ವ್ಯಕ್ತಿಯ ಬಾಲ್ಯದಲ್ಲಿ ಗಂಟಲಿನ ಭಾಗದಲ್ಲಿ ಶಸ್ತ್ರಚಿಕಿತ್ಸೆ ಆಗಿದ್ದ ಜಾಗದಲ್ಲಿ ಕೂದಲು ಕಾಣಿಸಿಕೊಂಡಿದ್ದವು. ತನ್ನ 10 ನೇ ವಯಸ್ಸಿನಲ್ಲಿ ಧೂಮಪಾನಿ ವ್ಯಕ್ತಿ ಟ್ರಾಕಿಯೊಟೊಮಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದನು.
ಪರೀಕ್ಷೆ ನಡೆಸಿದ ವೈದ್ಯರು ಎಂಡೋಟ್ರಾಶಿಯಲ್ ಕೂದಲಿನ ಬೆಳವಣಿಗೆಯೊಂದಿಗೆ ಮನುಷ್ಯನ ರೋಗನಿರ್ಣಯ ಮಾಡಿದರು.
ಈ ಕೂದಲುಗಳು ಸಾಮಾನ್ಯವಾಗಿ ಆರರಿಂದ ಒಂಬತ್ತು ಸಂಖ್ಯೆಯಲ್ಲಿರುತ್ತವೆ ಮತ್ತು ಸುಮಾರು 2 ಇಂಚು ಉದ್ದವಿರುತ್ತವೆ. ಧ್ವನಿ ಪೆಟ್ಟಿಗೆಯ ಮೂಲಕ ಇವು ಬೆಳೆಯುತ್ತವೆ. ಇದರಿಂದಾಗಿ ಅವುಗಳನ್ನು ತೆಗೆದುಹಾಕಲು 14 ವರ್ಷಗಳ ಕಾಲ ಪ್ರತಿ ವರ್ಷ ವ್ಯಕ್ತಿ ಆಸ್ಪತ್ರೆಗೆ ಭೇಟಿ ನೀಡಬೇಕಾಗಿತ್ತು.
ತಾತ್ಕಾಲಿಕವಾಗಿ ಕೂದಲುಗಳನ್ನು ತೆಗೆಯುತ್ತಿದ್ದರೂ ಮತ್ತು ಆಂಟಿಬಯಾಟಿಕ್ಸ್ ಬಳಸಿ ತಾತ್ಕಾಲಿಕವಾಗಿ ಉಪಶಮನ ಹೊಂದಿದ್ದರೂ ಕೂದಲಿನ ಬೆಳವಣಿಗೆ ಆಗುತ್ತಲೇ ಇತ್ತು.
2022 ರಲ್ಲಿ ಅಂತಿಮವಾಗಿ ವ್ಯಕ್ತಿ ಪ್ರಮುಖ ನಿರ್ಧಾರ ಕೈಗೊಂಡು ಧೂಮಪಾನ ಮಾಡುವುದನ್ನು ತೊರೆದನು. ಈ ಸಕಾರಾತ್ಮಕ ಬದಲಾವಣೆಯಿಂದ ವೈದ್ಯರು ಎಂಡೋಸ್ಕೋಪಿಕ್ ಆರ್ಗಾನ್ ಪ್ಲಾಸ್ಮಾ ಕೊಯಾಗುಲೇಷ್ ಎಂಬ ಹೊಸ ವಿಧಾನ ಬಳಸಿದರು. ಈ ತಂತ್ರವು ಕೂದಲಿನ ಬೆಳವಣಿಗೆಯ ಮೂಲವನ್ನು ಸುಡಲು ಉದ್ದೇಶಿತ ಶಕ್ತಿಯನ್ನು ಬಳಸಿ ಭವಿಷ್ಯದಲ್ಲಿ ಮತ್ತೆ ಕೂದಲು ಬೆಳೆಯುವುದನ್ನು ತಡೆಯುತ್ತದೆ.