ನಾಯಿಗಳು ನಿಸ್ಸಂದೇಹವಾಗಿ ಜನರೊಟ್ಟಿಗೆ ಬೆರೆಯುತ್ತವೆ. ಆದರೆ ನಾಯಿಗೆ ತರಬೇತಿ ನೀಡುವುದು ಮುಖ್ಯವಾಗುತ್ತದೆ. ತರಬೇತಿ ಪಡೆಯದ ಸಾಕುಪ್ರಾಣಿಗಳು ಅಪಾಯವಾಗಿ ಪರಿಣಮಿಸಬಹುದು ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ.
ಇಂಗ್ಲೆಂಡ್‌ನ ಬ್ರಿಸ್ಟಲ್‌ನ 51 ವರ್ಷದ ಅಮಂಡಾ ಗೊಮ್ಮೊ ಅವರ ಪ್ರಕರಣದಲ್ಲಿ ಇದು ಜೀವಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಆಕೆ ತನ್ನ ಮುದ್ದಿನ ನಾಯಿಮರಿಯಿಂದಾಗಿ ಅಪಾಯಕ್ಕೆ ಸಿಲುಕಿದ್ದಾರೆ. ಅಚ್ಚರಿ ಎಂದರೆ ಆ ನಾಯಿ ಮರಿ ಆಕೆಯ ಮುಖದ ಮೇಲೆ ಮಲ ವಿಸರ್ಜನೆ ಮಾಡಿತ್ತು. ಇದು ಅವಳನ್ನು ಮೂರು ದಿನಗಳವರೆಗೆ ಆಸ್ಪತ್ರೆಗೆ ದಾಖಲಾಗಲು ಕಾರಣವಾಯಿತು.
ಅಮಂಡಾ ಬಾಯಿ ತೆರೆದು ಮಧ್ಯಾಹ್ನ ಕಿರು ನಿದ್ದೆ ಮಾಡುವಾಗ ಈ ಘಟನೆ ನಡೆದಿದೆ. ಅವಳು ನಿದ್ರಿಸುತ್ತಿದ್ದಾಗ ಮುದ್ದಿನ ಚಿಹೋವಾ ಬೆಲ್ಲೆ ಮುಖದಾದ್ಯಂತ ಮಲ ವಿಸರ್ಜಿಸಿತ್ತು. ಅದು ಬಾಯಿಯೊಳಗೂ ಹೋಯಿತು.
ಇದರಿಂದ ಎಚ್ಚರವಾಗಿದ್ದು, ತಕ್ಷಣ ಮುಖ ತೊಳೆಯಲು ಕೂಡ ಸಾಧ್ಯವಾಗದಾಯಿತು. ಸ್ನಾನದ ಕೋಣೆಯಲ್ಲಿ ಮಗ ಇದ್ದುದರಿಂದ ಕೆಲ ಸಮಯ ಪರದಾಡಿದ್ದಾಳೆ.
ಮಲದ ರುಚಿಯನ್ನು ಅಸಹ್ಯಕರವೆಂದು ಕರೆದ ಅಮಂಡಾ, ಅದನ್ನು ತನ್ನ ಬಾಯಿಯಿಂದ ಹೊರಹಾಕಲು ಸಾಧ್ಯವಾಗಲಿಲ್ಲ ಮತ್ತು ಗಂಟೆಗಳ ಕಾಲ ತೀವ್ರವಾಗಿ ಕಷ್ಟಪಟ್ಟು ಹೊರಹಾಕಲಾಯಿತು. ಕೊನೆಗೆ ಅನಾರೋಗ್ಯದ ರೋಗಲಕ್ಷಣ ಕಾಣಿಸಿದ ನಂತರ ಪರಿಸ್ಥಿತಿಯು ಹದಗೆಟ್ಟಿತು. ತೀವ್ರವಾದ ಅತಿಸಾರದಿಂದಾಗಿ ಮೂತ್ರಪಿಂಡಗಳು ಕುಗ್ಗಿದವು ಎಂದು ಆಕೆ ಹೇಳಿಕೊಂಡಿದ್ದಾರೆ.
ಬಳಿಕ ಆಸ್ಪತ್ರೆಗೆ ದಾಖಲಾಗಿದ್ದು, ಜಠರಗರುಳಿನ ಸೋಂಕು ಕಾಣಿಸಿದೆ. ಅಮಂಡಾ ಮೂರು ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಎಲೆಕ್ಟ್ರೋಲೈಟ್‌ಗಳು ಮತ್ತು ಗ್ಲೂಕೋಸ್‌ನೊಂದಿಗೆ ರೀ ಹೈಡ್ರೇಟ್ ಮಾಡಿದ್ದಾರೆ.
ಆ ಮಹಿಳೆ ತನ್ನ ಚಿಹೋವಾವನ್ನು ಇನ್ನೂ ಪ್ರೀತಿಸುತ್ತಿದ್ದೇನೆ ಮತ್ತು ಅವಳನ್ನು ಕ್ಷಮಿಸಿದ್ದೇನೆ ಎಂದು ಹೇಳಿದ್ದಾರೆ. ಭವಿಷ್ಯದಲ್ಲಿ ಮಲಗುವ ಸ್ಥಳದ ಬಗ್ಗೆ ಹೆಚ್ಚು ಜಾಗರೂಕಳಾಗಿರುತ್ತೇನೆ ಎಂದು ಅಮಂಡಾ ತಮಾಷೆಯಾಗಿ ಹೇಳಿಕೊಂಡಿದ್ದಾರೆ.