
ದಾಹೋದ್ (ಗುಜರಾತ್) ವೇದಿಕೆ ಮೇಲೆ ನೃತ್ಯ ಪ್ರದರ್ಶನ ನೀಡುವ ವೇಳೆ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಏರುತ್ತಲೇ ಇದೆ. ಅದೇ ರೀತಿ, ಗುಜರಾತ್‌ನ ದಾಹೋದ್ ಜಿಲ್ಲೆಯಲ್ಲಿಯೂ ಇಂಥ ಘಟನೆ ನಡೆದಿದೆ.
ದಾಂಡಿಯಾ ರಾಸ್ ನೃತ್ಯ ಪ್ರದರ್ಶನ ನೀಡುತ್ತಿರುವಾಗ ಕುಸಿದುಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ. ಇದರ ವಿಡಿಯೋ ಭಾರಿ ವೈರಲ್ ಆಗಿದೆ. ಇದೇ 16 ರಂದು ಘಟನೆ ಸಂಭವಿಸಿದೆ.
ಹಲವರು ದಾಂಡಿಯಾ ನೃತ್ಯ ಮಾಡುತ್ತಿರುವ ವೇಳೆ, ವ್ಯಕ್ತಿಯೊಬ್ಬ ಕುಸಿದುಬಿದ್ದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕೂಡಲೇ ಅಲ್ಲಿದ್ದವರು ಓಡಿ ಸಹಾಯಕ್ಕೆ ಧಾವಿಸಿದ್ದಾರೆ.
ಕುಸಿದುಬಿದ್ದ ವ್ಯಕ್ತಿಯಲ್ಲಿ ಯಾವುದೇ ರೀತಿಯ ರೋಗ ಲಕ್ಷಣಗಳೂ ಇರಲಿಲ್ಲ, ಆಯಾಸವೂ ಇರಲಿಲ್ಲ. ಏಕಾಏಕಿ ಹೀಗೆ ಕುಸಿದು ಬಿದ್ದದ್ದನ್ನು ಕಂಡು ಜನರು ಆತಂಕಕ್ಕೀಡಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.