ತಾಂತ್ರಿಕ ಲೋಕದ ಬಿಗ್ ಶಾಟ್ ಗಳಲ್ಲಿ ಒಬ್ಬರಾದ ಮೈಕೇಲ್ ಗಾಗೆನ್ ವಿರುದ್ಧ ತಮ್ಮದೇ ಕಂಪನಿಯ ನಾಲ್ವರು ಉದ್ಯೋಗಿಗಳು ಕೋರ್ಟ್ ಮೆಟ್ಟಿಲೇರಿದ್ದು, $800 ದಶಲಕ್ಷವನ್ನು ಪರಿಹಾರದ ರೂಪದಲ್ಲಿ ಕೋರಿದ್ದಾರೆ.
ಇಷ್ಟಕ್ಕೂ ಈತನ ಮೇಲಿರೋ ಆರೋಪ ಏನಪ್ಪಾ ಅಂದ್ರೆ, ಅಮೆರಿಕದ ಮೊಂಟಾನಾ ಪ್ರದೇಶದ ವೈಟ್‌ಫಿಶ್ ಪಟ್ಟಣದ ಕಾನೂನು ಪಾಲನಾ ವ್ಯವಸ್ಥೆಯನ್ನೇ ನಿಯಂತ್ರಿಸುತ್ತಿರುವ ಗಾಗೆನ್, ತನಗೆಂದು ಅನೇಕ ’ಸುಭದ್ರ ಮನೆ’ಗಳನ್ನು ಹೊಂದಿದ್ದು, ಬಾರ್ ಒಂದರ ಕೋಣೆಯೊಂದರಲ್ಲಿ ಯುವತಿಯರನ್ನು ಕರೆದೊಯ್ದು ಅವರನ್ನು ಲೈಂಗಿಕ ದಾಸಿಯರನ್ನಾಗಿ ಬಳಸಿಕೊಂಡಿದ್ದಾನೆ. ಈ ಶಾಕಿಂಗ್ ದೂರಿನಲ್ಲಿ, ಗಾಗೆನ್ ತನ್ನ ಲೈಂಗಿಕ ಸಾಹಸಗಳನ್ನೆಲ್ಲಾ ಒಂದು ಸ್ಪ್ರೆಡ್‌ಶೀಟ್ ಡಾಕ್ಯುಮೆಂಟ್‌ನಲ್ಲಿ ದಾಖಲೆ ಮಾಡಿಕೊಂಡು ಬಂದಿರುವುದಾಗಿ ಸಹ ದೂರಿನಲ್ಲಿ ತಿಳಿಸಲಾಗಿದೆ. ಈತ ಈ ’ಸುಭದ್ರ ಮನೆ’ಗಳು ಹಾಗೂ ಕೋಣೆಗಳಲ್ಲಿ 5000ಕ್ಕೂ ಹೆಚ್ಚಿನ ಮಹಿಳೆಯರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ.
ಇಲ್ಲಿದೆ ʼವಿಶ್ವ ದೂರದರ್ಶನ ದಿನʼ ದ ಇಂಟ್ರಸ್ಟಿಂಗ್ ವಿಷಯ
ತಾಂತ್ರಿಕ ಲೋಕದ ಜಾಗತಿಕ ಕೇಂದ್ರ ಬಿಂದು ಸಿಲಿಕಾನ್ ವ್ಯಾಲಿಯ ಸಿಕೋಯಾ ಕ್ಯಾಪಿಟಲ್ ಎನ್ನುವ ವೆಂಚರ್ ಕಂಪನಿಯಲ್ಲಿ ಮಾಜಿ ಪಾಲುದಾರನಾದ ಗಾಗೆನ್, ಲೈಂಗಿಕ ಹಿಂಸಾಚಾರದ ಸಂಬಂಧ ನ್ಯಾಯಾಂಗ ತನಿಖೆ ಎದುರಿಸಬೇಕಾಗಿ ಬಂದಿರುವುದು ಇದೇ ಮೊದಲೇನಲ್ಲ. ಎರಡು ವರ್ಷಗಳ ಹಿಂದೆಯೂ ಸಹ ಗಾಗೆನ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಮಹಿಳೆಯೊಬ್ಬರು, ಆತ ತನ್ನನ್ನು ದಶಕಕ್ಕಿಂತಲೂ ಹೆಚ್ಚಿನ ಅವಧಿಗೆ ಲೈಂಗಿಕವಾಗಿ ಅತ್ಯಾಚಾರಗೈದಿದ್ದಾನೆ ಎಂದು ದೂರಿದ್ದರು.
ಮಾರ್ಚ್ 2016ರಲ್ಲಿ ಮತ್ತೊಂದು ತನಿಖೆಗೆ ಗಾಗೆನ್ ಒಳಗಾಗಿದ್ದಾನೆ ಎಂದು ಅರಿತ ಸೆಕೋಯಾ ಕ್ಯಾಪಿಟಲ್ ಈತನನ್ನು ತನ್ನ ಪಾಲುದಾರರ ಪಟ್ಟಿಯಿಂದ ಕಿತ್ತೊಗೆದಿತ್ತು. 1996ರಲ್ಲಿ ಕ್ಯಾಲಿಫೋರ್ನಿಯಾ ಮೂಲದ ಮೆನ್ಲೋ ಪಾರ್ಕ್ ಸೇರಿದ್ದ ಗಾಗೆನ್ ಬಳಿಕ ಸೆಕ್ಯೂರಿಟಿ ಕ್ಷೇತ್ರದಲ್ಲಿ ತನ್ನದೇ ಸಂಸ್ಥೆಯಾ ಅಮೈಂಟೋರ್ ಸಮೂಹ ಎಲ್‌ಎಲ್‌ಸಿ ಹುಟ್ಟುಹಾಕಿದ್ದ.
ಈ ಕಂಪನಿಯು ಜಾಗತಿಕ ದಿಗ್ಗಜ ಸಮೂಹಗಳಾದ ಆಪಲ್, ಸಿಸ್ಕೋ, ಗೂಗಲ್, ಯೂಟ್ಯೂಬ್, ಪೇಪಾಲ್ ಮತ್ತು ಇನ್‌ಸ್ಟಾಗ್ರಾಂಗಳಂಥ ಕಂಪನಿಗಳಿಗೆ ಫಂಡಿಂಗ್ ಮಾಡುತ್ತಿತ್ತು. ವರದಿಗಳ ಪ್ರಕಾರ, ಗಾಗೆನ್ $5 ಶತಕೋಟಿ ಮೌಲ್ಯದ ಆಸ್ತಿಯ ಒಡೆಯನಾಗಿದ್ದಾನೆ.