ಸಾಫ್ಟ್‌ವೇರ್ ಅನ್ನು ಸೇವೆಯನ್ನಾಗಿ ಒದಗಿಸುವ ಕಾನ್ಸೆಪ್ಟ್‌ನ ಫ್ರೆಶ್‌ವರ್ಕ್ಸ್ ಕಂಪನಿಯ ಶೇರುಗಳು ನಸ್ಡಾಕ್ ಸೂಚ್ಯಂಕದಲ್ಲಿ ಬುಧವಾರದಂದು $36/ಶೇರಿನಂತೆ ಪಾದಾರ್ಪಣೆ ಮಾಡುವ ಮೂಲಕ ಈ ಸಾಧನೆ ಮಾಡಿದ ದೇಶದ ಮೊದಲ ಸ್ಟಾರ್ಟ್ ಅಪ್ ಎಂಬ ಶ್ರೇಯಕ್ಕೆ ಭಾಜನವಾಗಿದೆ.
ಗಿರೀಶ್ ಮಾತೃಭೂತಮ್‌ರ ಈ ಸ್ಟಾರ್ಟ್‌ಅಪ್, ತನ್ನ ಹೂಡಿಕೆಯನ್ನು ಸಾರ್ವಜನಿಕಗೊಳಿಸುವ ಮೂಲಕ ಉದ್ಯೋಗಿಗಳಿಗೆ ದೊಡ್ಡ ಮಟ್ಟದಲ್ಲಿ ಸಂಪತ್ತು ಸೃಷ್ಟಿಯಾಗುವಂತೆ ಮಾಡಿದ್ದಾರೆ.
ವಾಲ್‌ಸ್ಟೀಟ್‌ನಲ್ಲಿ ಸದ್ಯ $12.2 ಶತಕೋಟಿಯಷ್ಟು ಮೌಲ್ಯ ಹೊಂದಿರುವ ಫೆಶವರ್ಕ್ಸ್ ಬುಧವಾರದಂದು 21%ನಷ್ಟು ಹೆಚ್ಚಿನ ದರದೊಂದಿಗೆ ವಹಿವಾಟು ಆರಂಭಿಸಿದೆ. ಕಂಪನಿಯ ಮೂರನೇ ಎರಡರಷ್ಟು ಉದ್ಯೋಗಿಗಳು ಶೇರುದಾರರಾಗಿದ್ದಾರೆ.
ಸೋಮವಾರದಂದು ತಮ್ಮ ಕಂಪನಿ ಸಾರ್ವಜನಿಕವಾಗಿ ಹೂಡಿಕೆಗೆ ಬಂದ ಬಳಿಕ 500ರಷ್ಟು ಉದ್ಯೋಗಿಗಳು ಕೋಟ್ಯಾಧಿಪತಿಗಳಾಗಿದ್ದು, ಇವರ ಪೈಕಿ 69ರಷ್ಟು ಮಂದಿಗೆ 30ಕ್ಕಿಂತ ಕಡಿಮೆ ವಯಸ್ಸು ಎಂದು ಗಿರೀಶ್ ತಿಳಿಸಿದ್ದಾರೆ.
ಈ ಬ್ಯಾಂಕ್ ‘ಉಳಿತಾಯ’ ಖಾತೆಯಲ್ಲಿ ಸಿಗ್ತಿದೆ ಹೆಚ್ಚು ಬಡ್ಡಿ
ಸಾಫ್ಟ್‌ವೇರ್ ಅನ್ನು ಸೇವೆಯಾಗಿ ಒದಗಿಸುವ (ಸಾಸ್) ಕ್ಷೇತ್ರವು $120 ಶತಕೋಟಿ ಮಾರುಕಟ್ಟೆಯಾಗಿದ್ದು, ತಮ್ಮ ಕಂಪನಿಗೆ ಉಜ್ವಲ ಭವಿಷ್ಯವಿದೆ ಎನ್ನುವ ಗಿರೀಶ್, ತಮ್ಮ ಕಂಪನಿಯ ಯಶಸ್ಸನ್ನು ಎಲ್ಲಾ ಉದ್ಯೋಗಿಗಳಿಗೆ ಅರ್ಪಿಸಿದ್ದಾರೆ.
“ನಮ್ಮ ಕಂಪನಿಯು ಅಮೆರಿಕದಲ್ಲಿ ಪ್ರಧಾನ ಕಾರ್ಯಾಲಯ ಹೊಂದಿದ್ದು, 120ಕ್ಕೂ ಹೆಚ್ಚು ದೇಶಗಳಲ್ಲಿ ಸಕ್ರಿಯವಾಗಿದೆ. ಆರಂಭದಿಂದಲೇ ನಾವು ಜಾಗತಿಕ ಕಂಪನಿಯಾಗಿರುವ ಕಾರಣ ಅಮೆರಿಕದ ಶೇರು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲು ಮುಂದಾಗಿದ್ದೇವೆ,” ಎನ್ನುತ್ತಾರೆ ಗಿರೀಶ್.
ಐಪಿಓ ಬೆಲೆಗಿಂತ 21%ನಷ್ಟು ಹೆಚ್ಚಿನ ಬೆಲೆಯನ್ನು ಆರಂಭದಲ್ಲೇ ಕಂಡುಕೊಂಡ ಫ್ರೆಶ್‌ವರ್ಕ್ಸ್ , ಚೆನ್ನೈನಲ್ಲಿ ಸ್ಥಾಪಿತವಾದ ಕಂಪನಿಯಾಗಿದ್ದು, ಕಂಪನಿಗಳು ತಮ್ಮ ಗ್ರಾಹಕರೊಂದಿಗಿನ ಸಂವಹನ ನಿರ್ವಹಣೆ ಮಾಡಲು ಕೃತಕ ಬುದ್ಧಿಮತ್ತೆ ಆಧರಿತ ಚಾಟ್‌ಬಾಟ್, ಮೆಸೇಜಿಂಗ್ ವ್ಯವಸ್ಥೆಯಂಥ ಸವಲತ್ತುಗಳನ್ನು ಒದಗಿಸುತ್ತದೆ.
ಕ್ಯಾಲಿಫೋರ್ನಿಯಾದಲ್ಲಿ ಪ್ರಧಾನ ಕಾರ್ಯಾಲಯವಿರುವ ಫ್ರೆಶ್‌ವರ್ಕ್ಸ್ ಸಂಸ್ಥೆಯನ್ನು ಮಾತೃಭೂತಮ್ ಮತ್ತು ಶಾನ್ ಕೃಷ್ಣಸ್ವಾಮಿ ಹುಟ್ಟುಹಾಕಿದ್ದಾರೆ. 50,000ಕ್ಕೂ ಹೆಚ್ಚಿನ ಕಂಪನಿಗಳಿಗೆ ಸೇವೆ ಒದಗಿಸುವ ಫ್ರೆಶ್‌ವರ್ಕ್ಸ್ಗೆ ಸೆಕೋಯಾ ಕ್ಯಾಪಿಟಲ್ ಹಾಊ ಟೈಗರ್ ಗ್ಲೋಬಲ್ ಮ್ಯಾನೇಜ್ಮೆಂಟ್ ಆರ್ಥಿಕ ನೆರವು ನೀಡುತ್ತಿವೆ.