alex Certify ಕರ್ನಾಟಕವೆಂದು ನಾಮಕರಣಗೊಂಡು 50 ವರ್ಷ : ನ.1 ರಿಂದ ರಾಜ್ಯಾದ್ಯಂತ `ಕರ್ನಾಟಕ ಸಂಭ್ರಮಾಚರಣೆ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರ್ನಾಟಕವೆಂದು ನಾಮಕರಣಗೊಂಡು 50 ವರ್ಷ : ನ.1 ರಿಂದ ರಾಜ್ಯಾದ್ಯಂತ `ಕರ್ನಾಟಕ ಸಂಭ್ರಮಾಚರಣೆ’

ಧಾರವಾಡ :  ಕನ್ನಡ ನಾಡು ಕರ್ನಾಟಕವೆಂದು ನಾಮಕರಣಗೊಂಡು  50 ವರ್ಷಗಳು ಸಂದ ಸಂದರ್ಭದಲ್ಲಿ ಬರುವ ನವಂಬರ್ 1 ರಿಂದ 2024ರ ನವೆಂಬರ್ 1 ರ ವರೆಗೆ  ರಾಜ್ಯದಾದ್ಯಂತ ಕರ್ನಾಟಕ ಸಂಭ್ರಮ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಶಿವರಾಜ್ ತಂಗಡಿಗೆ ಅವರು ಹೇಳಿದರು.

ಮಂಗಳವಾರ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಟೀಲ್ ಪುಟ್ಟಪ್ಪ ಸಭಾ ಭವನದಲ್ಲಿ  ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಯೋಜಿಸಿದ್ದ  ಕರ್ನಾಟಕ ಸಂಭ್ರಮ-2023 ರ  ಕಾರ್ಯಕ್ರಮ ಆಚರಣೆಯ ಕುರಿತು ಬೆಳಗಾವಿ ವಿಭಾಗದ ಎಲ್ಲ ಜಿಲ್ಲೆಗಳ ಹಿರಿಯ  ಸಾಹಿತಿಗಳ, ಕಲಾವಿದರ, ಚಿಂತಕರ ಸಲಹೆ, ಸಹಕಾರ, ಮಾರ್ಗದರ್ಶನ ಪಡೆಯಲು ಆಯೋಜಿಸಿದ್ದ  ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

 ಮೈಸೂರು ರಾಜ್ಯಕ್ಕೆ 1973 ರಲ್ಲಿ ಕರ್ನಾಟಕವೆಂದು ನಾಮಕರಣ ಮಾಡಲಾಗಿತ್ತು, 2023 ಕ್ಕೆ  50 ವರ್ಷವಾಗುತ್ತಿದ್ದು, ನಾಮಕರಣದ ಸುವರ್ಣ ಸಂಭ್ರಮವನ್ನು ಕರ್ನಾಟಕ ರಾಜ್ಯದ ಸಂಭ್ರಮವಾಗಿ ಆಚರಿಸಲು  ರಾಜ್ಯದ ಹಿರಿಯ ಸಾಹಿತಿ, ಕಲಾವಿದ, ಚಿಂತಕರ ಮತ್ತು ಸಾಹಿತ್ಯ ಸಂಘಟಕರ ಸಭೆಗಳನ್ನು ವಿಭಾಗವಾರು ಆಯೋಜಿಸಲಾಗುತ್ತಿದೆ.

ಈಗಾಗಲೇ ಬೆಂಗಳೂರು ಕಂದಾಯ ವಿಭಾಗದ ಜಿಲ್ಲೆಗಳ ಸಭೆ ಮುಗಿದಿದ್ದು, ಇಂದು (ಆ.22) ಧಾರವಾಡದಲ್ಲಿ ಬೆಳಗಾವಿ ಕಂದಾಯ ವಿಭಾಗದ ಜಿಲ್ಲೆಗಳ ಸಭೆ ನಡೆಸಲಾಗಿದೆ. ಅತಿ ಉಪಯುಕ್ತವಾದ ಮತ್ತು ಮಹತ್ವದ ಸಲಹೆಗಳನ್ನು ಹಿರಿಯರು ನೀಡಿದ್ದಾರೆ. ಲಿಖಿತವಾಗಿಯೂ ಸಲಹೆಗಳನ್ನು ಸ್ವೀಕರಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಬರುವ ಸೆಪ್ಟೆಂಬರ್ 28ರಂದು  ಕಲಬುರ್ಗಿಯಲ್ಲಿ  ಕಲಬುರ್ಗಿ ಕಂದಾಯ ವಿಭಾಗದ ಜಿಲ್ಲೆಗಳ ಸಾಹಿತಿಗಳ ಮತ್ತು ಸೆಪ್ಟೆಂಬರ್ 4ರಂದು ಮೈಸೂರಿನಲ್ಲಿ  ಮೈಸೂರು ಕಂದಾಯ ವಿಭಾಗದ ಜಿಲ್ಲೆಗಳ ಸಾಹಿತಿಗಳ  ಸಭೆ ಜರುಗಿಸಲಾಗುತ್ತದೆ. ಪೂರ್ವಭಾವಿ ಸಭೆಗಳಲ್ಲಿ ಮೌಖಿಕವಾಗಿ ಮತ್ತು ಲಿಖಿತವಾಗಿ  ಸ್ವೀಕರಿಸಿರುವ ಸಲಹೆಗಳನ್ನು ಕ್ರೊಢೀಕರಿಸಿ ಉತ್ತಮವಾದ ಸಲಹೆಗಳನ್ನು ಸಮಿತಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಕುರಿತು ಹಿರಿಯ ಸಾಹಿತಿಗಳು, ತಜ್ಞರೊಂದಿಗೆ ಚರ್ಚಿಸಿ ಕರ್ನಾಟಕ ಸಂಭ್ರಮ ಕಾರ್ಯಕ್ರಮದ ಅಂತಿಮ ರೂಪುರೇμÉಗಳನ್ನು ಸಿದ್ಧಪಡಿಸಲಾಗುತ್ತದೆ. ಮಾನ್ಯ ಮುಖ್ಯಮಂತ್ರಿಗಳ ಅವಗಾಹನೆಗೆ ತಂದು, ಸೆಪ್ಟೆಂಬರ್ 10 ಅಥವಾ 11 ರಂದು ಕರ್ನಾಟಕ ಸಂಭ್ರಮ ಕಾರ್ಯಕ್ರಮ ಪ್ರಕಟಿಸಲು  ಉದ್ದೇಶಿಸಲಾಗಿದೆ ಎಂದು ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು.

ಕರ್ನಾಟಕ ಸಂಭ್ರಮ ಕಾರ್ಯಕ್ರಮವು  ಬಜೆಟ್‍ದಲ್ಲಿ ಘೋಷಣೆಯಾಗಿದ್ದು, ಮುಂದಿನ ಒಂದು ವರ್ಷ ಪೂರ್ತಿ ವಿವಿಧ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣವಾಗಿ ಕರ್ನಾಟಕ ಸಂಭ್ರಮ ಆಚರಿಸಲಾಗುತ್ತದೆ.ಶಾಲಾ ಕಾಲೇಜುಗಳಲ್ಲಿ ಕನ್ನಡ ನಾಡು-ನುಡಿಯ ಬಗ್ಗೆ ಚಿಂತನ-ಮಂಥನ, ಗ್ರಾಮ ಮಟ್ಟದಲ್ಲಿ ಸಾಹಿತ್ಯ, ಜಾನಪದ ಕಾರ್ಯಕ್ರಮಗಳ ಆಯೋಜನೆ, ವಿಶೇಷವಾದ 50 ಕನ್ನಡ ಪುಸ್ತಕಗಳ  ಪ್ರಕಟಣೆ, 50 ಜನ ಕನ್ನಡ ದಿಗ್ಗಜರಿಗೆ ಸನ್ಮಾನ, ಕನ್ನಡ ರಥ ಅಥವಾ ಜ್ಯೋತಿ ಸಂಚಾರ ಸೇರಿದಂತೆ ವಿಶೇಷವಾದ ಕಾರ್ಯಕ್ರಮಗಳನ್ನು ವರ್ಷಪೂರ್ತಿ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...