ಬಿಹಾರದ ಭೋಜಪುರ ಜಿಲ್ಲೆಯ ಪಿರೋ ಪೊಲೀಸ್ ಠಾಣೆಯಲ್ಲಿ ಲಾಕಪ್ನಲ್ಲೇ ಸಾವನ್ನಪ್ಪಿದ 50 ವರ್ಷ ದ ಮಹಿಳೆಯ ನಿಗೂಢ ಸಾವಿನ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿ ವಿವರವಾದ ವರದಿಯನ್ನು ಕೇಳಿದ್ದಾರೆ.
50 ವರ್ಷದ ಮಹಿಳೆಯನ್ನು ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಆದರೆ ಈ ಮಹಿಳೆ ಠಾಣೆಯೊಳಗಿನ ಲಾಕಪ್ ಪಕ್ಕದಲ್ಲಿದ್ದ ಶೌಚಾಲಯದೊಳಗೆ ನೇಣು ಬಿಗಿದುಕೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದರು. ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತಾದ್ದರೂ ಆಕೆ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ.
ಮೃತ ಮಹಿಳೆಯ ಸಹೋದರ ನೀಡಿರುವ ಮಾಹಿತಿಯ ಪ್ರಕಾರ ಮೃತ ಮಹಿಳೆ ಹಾಗೂ ಆಕೆಯ ಪುತ್ರನನ್ನು ಗ್ರಾಮೀಣ ವೈದ್ಯ ಮಂತೋಶ್ ಕುಮಾರ್ ಆರ್ಯ ಕೊಲೆ ಆರೋಪದ ಅಡಿಯಲ್ಲಿ ಸೆಪ್ಟೆಂಬರ್ 8ರಂದು ಬಂಧಿಸಲಾಗಿತ್ತು. ನಾಲ್ಕು ದಿನಗಳ ತಮ್ಮ ಸಹೋದರಿಯನ್ನು ಮಹಿಳಾ ಲಾಕಪ್ನಲ್ಲಿಡದೇ ಮಹಿಳಾ ಕಾನ್ಸ್ಟೇಬಲ್ ಕ್ವಾರ್ಟರ್ನಲ್ಲಿ ಕಾನೂನುಬಾಹಿರವಾಗಿ ಇರಿಸಲಾಗಿತ್ತು. ಇಲ್ಲಿ ಆಕೆಯನ್ನು ಹಿಂಸಿಸಲಾಗಿತ್ತು. ಹೀಗಾಗಿ ಪ್ರಕರಣ ಸಂಬಂಧ ಪಿರೊ ಠಾಣೆ ಮುಖ್ಯಸ್ಥ ಹಾಗೂ ತನಿಖಾಧಿಕಾರಿಯನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
ಮಂತೋಶ್ ನಾಪತ್ತೆಯಾಗಿದ್ದಾರೆ ಎಂದು ಕುಟುಂಬಸ್ಥರು ಆಗಸ್ಟ್ 29ರಂದು ಪ್ರಕರಣ ದಾಖಲಿಸಿದ್ದರು. ಇದಾದ ಬಳಿಕ ಸೆಪ್ಟೆಂಬರ್ 1ರಂದು ಪತ್ತೆ ಮಾಡಿದ್ದರು. ಕುಟುಂಬಸ್ಥರು ಮೃತ ಮಹಿಳೆ ಸೇರಿದಂತೆ ಆರು ಮಂದಿಯ ಮೇಲೆ ಶಂಕೆ ವ್ಯಕ್ತಪಡಿಸಿದ್ದರು. ಹೀಗಾಗಿ ಪೊಲೀಸರು ಮಹಿಳೆ, ಆಕೆಯ ಪುತ್ರ, ಮಂತೋಶ್ನ ಮೂವರು ಸೋದರ ಸಂಬಂಧಿಯನ್ನು ಬಂಧಿಸಲಾಗಿತ್ತು.
ಮೃತ ಮಹಿಳೆಗೆ ಓರ್ವ ಪುತ್ರಿ ಸೇರಿದಂತೆ ಐವರು ಮಕ್ಕಳಿದ್ದರು. ಇಬ್ಬರು ಮಕ್ಕಳು ರಾಜಾಕೋಟ್ ಹಾಗೂ ಗುಜರಾತ್ನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈಕೆಯ ಪತಿ ಜಾರ್ಖಂಡ್ನಲ್ಲಿ ಜಮ್ಶೇಡ್ಪುರದಲ್ಲಿ ಕೆಲಸ ಮಾಡುತ್ತಿದ್ದರು.
ಠಾಣೆಯಲ್ಲಿಯೇ ಮಹಿಳೆಯ ಸಾವು ಪ್ರಕರಣದ ಸಂಬಂಧ ಈಗಾಗಲೇ ಸ್ಟೇಷನ್ ಹೌಸ್ ಆಫೀಸರ್ ಹಾಗೂ ತನಿಖಾಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.