SSLC, ಪಿಯುಸಿ ಪರೀಕ್ಷೆ ಫಲಿತಾಂಶ ಅಂದ್ರೆ ಸಾಕು ವಿದ್ಯಾರ್ಥಿಗಳಿಗೆ ಟೆನ್ಷನ್ನೋ ಟೆನ್ಷನ್ನು….. ಏನಾದ್ರೂ ಅಂದ್ಕೊಂಡಿದ್ದಕ್ಕಿಂತ ಕಡಿಮೆ ಅಂಕ ಸಿಗ್ತೋ, ವಿದ್ಯಾರ್ಥಿಗಳಿಗೆ ಆಗೋ ಬೇಸರ ಅಷ್ಟಿಷ್ಟಲ್ಲ. ಆದರೆ ಇಲ್ಲೊಬ್ಬ ವ್ಯಕ್ತಿ ಇದ್ದಾರೆ ನೋಡಿ, ಅನೇಕರಿಗೆ ಮಾದರಿಯಾಗಿದ್ದಾರೆ. ಕೇವಲ ವಿದ್ಯಾರ್ಥಿಗಳು ಮಾತ್ರ ಅಲ್ಲ ವಿದ್ಯೆಯನ್ನ ನಿರ್ಲಕ್ಷಿಸಿದವರು ಇವರಿಂದ ಕಲಿಯೋದು ತುಂಬಾ ಇದೆ.
ಇವರ ಹೆಸರು ಕುಂಚಿಕೊರ್ವೆ ಮಶಣ್ಣಾ ರಾಮಪ್ಪ ವಯಸ್ಸು 50 ವರ್ಷ. ಇವರು ಮುಂಬೈ ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾರೆ. ಈ ವಯಸ್ಸಿನಲ್ಲಿ ಇವರು ಮಾಡಿದ್ದ ಸಾಧನೆ ನೋಡ್ತಿದ್ರೆ ಎಂಥವರು ಕೂಡಾ ಅಚ್ಚರಿ ಪಡುವ ಹಾಗಿದೆ. 10ನೇ ತರಗತಿ ಬೋರ್ಡ್ ಪರೀಕ್ಷೆ ಅಂದ್ರೆ ಎಲ್ಲರಿಗೂ ಗೊತ್ತಿರುವ ಹಾಗೆ ಅದೊಂದು ಕಠಿಣ ಪರೀಕ್ಷೆ. ಎಷ್ಟೋ ಜನ ಪರೀಕ್ಷೆ ಪಾಸಾಗೋಕೆ ಒದ್ದಾಡ್ತಿರ್ತಾರೆ. ಆದರೆ 50 ವರ್ಷದ ಕುಂಚಿಕೊರ್ವೆ ಮಶಣ್ಣಾ ರಾಮಪ್ಪ ಇವರು ಈ ಪರೀಕ್ಷೆಯನ್ನ ಬರೆದು 57.40 ಅಂಕವನ್ನ ಸಹ ಪಡೆದಿದ್ದಾರೆ. ಅದು ಕೂಡಾ ಮೊದಲ ಪ್ರಯತ್ನದಲ್ಲಿ.
ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: 42,000 ಸರ್ಕಾರಿ ಉದ್ಯೋಗಿಗಳ ನೇಮಕಾತಿ
ಶ್ರದ್ಧೆ ಹಾಗೂ ಪರಿಶ್ರಮ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಅನ್ನೋದಕ್ಕೆ ಕುಂಚಿಕೊರ್ವೆ ಮಶಣ್ಣ ರಾಮಪ್ಪ ಬೆಸ್ಟ್ ಎಗ್ಸಾಂಪಲ್. 1989ರಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಇವರಿಗೆ BMCಯಲ್ಲಿ ಕೆಲಸ ಸಿಕ್ಕಿತ್ತು. ಆ ಸಮಯದಲ್ಲಿ ಅವರ ವಿದ್ಯಾಭ್ಯಾಸ ಕೇವಲ 4ನೇ ತರಗತಿ. 10ನೇ ತರಗತಿ ಓದಿಲ್ಲವಾಗಿದ್ದರಿಂದ ಅವರಿಗೆ ಉತ್ತಮ ಸಂಬಳ ಕೂಡಾ ಸಿಕ್ಕಿರಲಿಲ್ಲ ಜೊತೆಗೆ ಕೆಲಸದಲ್ಲಿ ಬಡ್ತಿಯೂ ಸಿಕ್ಕಿರಲಿಲ್ಲ. ಇದೆಲ್ಲವನ್ನ ಸವಾಲಾಗಿ ತೆಗೆದುಕೊಂಡು ಮಶಣ್ಣಾ ಅವರು ಮಕ್ಕಳ ಸಹಾಯದಿಂದ 10ನೇ ತರಗತಿಯ ಬೋರ್ಡ್ ಪರೀಕ್ಷೆ ಬರೆದು ಪಾಸಾಗಿದ್ದಾರೆ.
ಇದಕ್ಕಾಗಿಯೇ ಅವರು ಮೂರು ವರ್ಷದ ಹಿಂದೆಯೇ ರಾತ್ರಿ ಶಾಲೆಗೆ ಹೋಗಿ 8ನೇ ತರಗತಿ ಅಡ್ಮಿಶನ್ ಮಾಡಿಸಿದ್ದಾರೆ. ಆ ನಂತರ ಮೂರು ವರ್ಷ ಕಠಿಣ ಶ್ರಮದಿಂದ ಓದಿ 10ನೇ ತರಗತಿ ಉತ್ತೀರ್ಣರಾಗಿದ್ದರೆ. ತಾವು ಈ ಸಾಧನೆ ಸಾಧಿಸೋಕೆ ಸಾಧ್ಯವಾಗಿರೋದು ಹೆಂಡತಿ, ಮೂವರು ಮಕ್ಕಳು ಹಾಗೂ BMC ಸಹೋದ್ಯೋಗಿಗಳು ಅಂತ ಹೇಳುವುದನ್ನ ಅವರು ಮರೆಯುವುದಿಲ್ಲ. ಈಗ ಅವರಿಗೆ ವಿದ್ಯಾಭ್ಯಾಸ ಮುಂದುವರೆಸುವ ಆಸೆ ಇದ್ದು. ಇವರ ಮುಂದಿನ ಗುರಿ ಗ್ರಾಜ್ಯೂವೆಷನ್ ಮಾಡುವುದಾಗಿದೆ.