alex Certify ಹೆಸರಲ್ಲಿ ‘ರಾಮ’ ಇದ್ದರೆ ಶೇಕಡ 50ರಷ್ಟು ರಿಯಾಯಿತಿ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಸರಲ್ಲಿ ‘ರಾಮ’ ಇದ್ದರೆ ಶೇಕಡ 50ರಷ್ಟು ರಿಯಾಯಿತಿ ಘೋಷಣೆ

ಗೋರಖ್ ಪುರ: ಅಯೋಧ್ಯ ಶ್ರೀ ರಾಮ ಮಂದಿರದಲ್ಲಿ ಈ ಜನವರಿ 22ರಂದು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನೆರವೇರಲಿದೆ. ಇದರ ನಿಮಿತ್ತ ಗೋರಖ್ ಪುರ ಮೃಗಾಲಯ ವಿಶೇಷ ರಿಯಾಯಿತಿ ಘೋಷಿಸಿದೆ.

ಮೃಗಾಲಯಕ್ಕೆ ಭೇಟಿ ನೀಡುವವರ ಹೆಸರಲ್ಲಿ ‘ರಾಮ’ ಎಂಬ ಹೆಸರಿದ್ದಲ್ಲಿ ಅಂತವರಿಗೆ ಟಿಕೆಟ್ ನಲ್ಲಿ ಶೇಕಡ 50ರಷ್ಟು ರಿಯಾಯಿತಿ ನೀಡುವುದಾಗಿ ಘೋಷಿಸಲಾಗಿದೆ. ತಮ್ಮ ಹೆಸರನ್ನು ದೃಢೀಕರಿಸಲು ಗುರುತಿನ ಚೀಟಿ ಸೇರಿದಂತೆ ಪ್ರಮಾಣಿಕೃತ ದಾಖಲೆ ಸಲ್ಲಿಸಬೇಕು. ಜನವರಿ 21ಕ್ಕೆ ಮಾತ್ರ ರಿಯಾಯಿತಿ ಸೀಮಿತವಾಗಿರುತ್ತದೆ ಎಂದು ಮೃಗಾಲಯದ ನಿರ್ದೇಶಕ ಮನೋಜ್ ಕುಮಾರ್ ಶುಕ್ಲಾ ಹೇಳಿದ್ದಾರೆ.

ರಾಮ ಎಂಬ ಪದವನ್ನು ಹೊಂದಿರುವ ಜನರು ಜನವರಿ 21 ರಂದು ಗೋರಖ್‌ಪುರ ಮೃಗಾಲಯದ ಪ್ರವೇಶ ಟಿಕೆಟ್‌ಗಳಲ್ಲಿ ಶೇಕಡಾ 50 ರಷ್ಟು ರಿಯಾಯಿತಿಯನ್ನು ಪಡೆಯುತ್ತಾರೆ. ಈ ಮೃಗಾಲಯದಲ್ಲಿ 150 ಕ್ಕೂ ಹೆಚ್ಚು ಪ್ರಾಣಿಗಳು ಮತ್ತು ಅನೇಕ ಜಾತಿಯ ಪಕ್ಷಿಗಳು ಇವೆ. ನೋಡಲು ಹೆಚ್ಚಿನ ಸಂಖ್ಯೆಯ ಜನ ಬರುತ್ತಾರೆ.

ರಾಮ್, ಗೋಪಾಲರಾಮ್, ಸೀತಾರಾಮ್, ರಾಮಚಂದ್ರ, ರಾಮಾಯಣ, ರಾಮಲೀಲಾ, ರಾಮನಾಥ್, ರಾಮಗೋಪಾಲ್, ರಾಮಶಂಕರ್, ರಾಮಸುಂದರ್, ರಾಮಪ್ರಸಾದ್, ರಾಮನಿವಾಸ್, ರಾಮಕೃಷ್ಣ ಹೀಗೆ ಹೆಸರು ಇರುವವರಿಗೆ ರಿಯಾಯಿತಿ ಇರಲಿದೆ.

ಮೃಗಾಲಯಕ್ಕೆ ಬರುವ ಪ್ರವಾಸಿಗರು ತಮ್ಮ ಹೆಸರಿನಲ್ಲಿ ರಾಮ್ ಎಂಬ ಪದವನ್ನು ಹೊಂದಿದ್ದರೆ, ಕೌಂಟರ್‌ನಲ್ಲಿ ಆಧಾರ್ ಕಾರ್ಡ್ ತೋರಿಸಿದಲ್ಲಿ 50 ಪ್ರತಿಶತ ರಿಯಾಯಿತಿ ಪಡೆಯುತ್ತಾರೆ. ಟಿಕೆಟ್ ದರ ವಯಸ್ಕರಿಗೆ 50 ರೂ. ಆಗಿದ್ದು, ಹೆಸರಿನಲ್ಲಿ ರಾಮ್ ಎಂಬ ಪದವಿದ್ದರೆ ಟಿಕೆಟ್ ದರ 25 ರೂ. ನೀಡಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...