ಯುವತಿಯೊಬ್ಬರು ರೈಲಿನ ಛಾವಣಿಯನ್ನೇ ಟ್ರೆಡ್ ಮಿಲ್ ಆಗಿ ಮಾಡಿಕೊಂಡು ಅದರ ಮೇಲೆ ಓಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇಂಟರ್ನೆಟ್ ಬಳಕೆದಾರರನ್ನು ಬೆಚ್ಚಿಬೀಳಿಸಿದೆ.
ಚಲಿಸುತ್ತಿರುವ ರೈಲಿನ ಮೇಲೆ ಯುವತಿ ಓಡುತ್ತಿರುವುದನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದ್ದು, ಇದು ನೆಟಿಜನ್‌ಗಳಿಗೆ ಜನಪ್ರಿಯ ಮೊಬೈಲ್ ಗೇಮ್ – ಸಬ್‌ವೇ ಸರ್ಫರ್ಸ್ ಅನ್ನು ನೆನಪಿಸಿದೆ. ಯುವತಿ ಮೊದಲು ರೈಲಿನ ಛಾವಣಿ ಮೇಲೆ ಜಾಗಿಂಗ್ ಮಾಡಿದ್ದು, ನಂತರ ಒಂದು ಕೋಚ್‌ನಿಂದ ಇನ್ನೊಂದಕ್ಕೆ ಜಿಗಿಯಲು ಪ್ರಾರಂಭಿಸಿದ್ದಾಳೆ, ರೈಲು ವೇಗವಾಗಿ ಚಲಿಸುತ್ತಿದ್ದಾಗ, ವೀಡಿಯೊದ ಕೊನೆಯಲ್ಲಿ ಅವಳು ನೃತ್ಯ ಮಾಡಿದ್ದಾಳೆ.
ನ್ಯೂಸ್ 18 ಪ್ರಕಾರ, ಬಾಂಗ್ಲಾದೇಶದ ರೈಲು ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದ್ದು, ಮೀಮ್ ಪಾರ್ಟಿ ಹೆಸರಿನ ಪುಟವು ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದೆ. ವೀಡಿಯೊ 20 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದ್ದು, ಅವಳು ಹೇಗೆ ಮೇಲಕ್ಕೆ ಏರಲು ಸಾಧ್ಯವಾಯಿತು ಎಂದು ಜನರು ಆಶ್ಚರ್ಯ ಪಡುತ್ತಿದ್ದಾರೆ. ಅನೇಕ ಬಳಕೆದಾರರು ಯುವತಿಯ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಯುವತಿಯ ಈ ಸಾಹಸದಿಂದ ಬೆರಗಾಗುವುದು ಸುಲಭ, ಆದರೆ ಇದು ಅತ್ಯಂತ ಅಪಾಯಕಾರಿಯಾಗಿದೆ. ಚಲಿಸುವ ರೈಲಿನ ಮೇಲೆ ಓಡುವುದು ಮತ್ತು ನೃತ್ಯ ಮಾಡುವುದು ಅಪಾಯಕಾರಿ ಮಾತ್ರವಲ್ಲ ಇದು ಕಾನೂನುಬಾಹಿರ ಕೂಡ.