alex Certify ಕೇವಲ 3 ತಿಂಗಳಲ್ಲಿ ಮಾರಾಟವಾಗಿವೆ 50 ಲಕ್ಷ ದ್ವಿಚಕ್ರ ವಾಹನಗಳು; ನಂಬರ್‌ 1 ಸ್ಥಾನದಲ್ಲಿದೆ ಈ ಸ್ಕೂಟರ್‌…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ 3 ತಿಂಗಳಲ್ಲಿ ಮಾರಾಟವಾಗಿವೆ 50 ಲಕ್ಷ ದ್ವಿಚಕ್ರ ವಾಹನಗಳು; ನಂಬರ್‌ 1 ಸ್ಥಾನದಲ್ಲಿದೆ ಈ ಸ್ಕೂಟರ್‌…..!

ಭಾರತದಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಬೈಕ್‌ ಹಾಗೂ ಸ್ಕೂಟರ್‌ಗಳ ಕ್ರೇಝ್‌ ಕೂಡ ಕಮ್ಮಿಯೇನಿಲ್ಲ. ಈ ವರ್ಷ ಏಪ್ರಿಲ್‌ನಿಂದ ಜೂನ್‌ವರೆಗೆ ಸುಮಾರು 50 ಲಕ್ಷ ದ್ವಿಚಕ್ರ ವಾಹನಗಳು ಮಾರಾಟವಾಗಿವೆ. ಇದರಲ್ಲಿ 10 ಲಕ್ಷಕ್ಕೂ ಹೆಚ್ಚು ಸ್ಕೂಟರ್‌ಗಳು ಸೇರಿವೆ.

ವರದಿಗಳ ಪ್ರಕಾರ ಆಟೋಮೊಬೈಲ್ ವಲಯದ ದ್ವಿಚಕ್ರ ವಾಹನ ವಿಭಾಗದ ಮಾರಾಟದಲ್ಲಿ ಭಾರಿ ಬೆಳವಣಿಗೆ ಕಂಡುಬಂದಿದೆ. ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಒಟ್ಟು 4.98 ಮಿಲಿಯನ್ ಯೂನಿಟ್‌ಗಳು ಮಾರಾಟವಾಗಿದೆ. ಇವುಗಳಲ್ಲಿ 33 ಪ್ರತಿಶತದಷ್ಟು ಸ್ಕೂಟರ್‌ಗಳೇ ಇರುವುದು ವಿಶೇಷ. 3.19 ಮಿಲಿಯನ್ ಬೈಕ್‌ಗಳು ಮಾರಾಟವಾಗಿವೆ. 1,22,715 ಮೊಪೆಡ್‌ಗಳು ಕೂಡ ಈ ತ್ರೈಮಾಸಿಕದಲ್ಲಿ ಬಿಕರಿಯಾಗಿವೆ.

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೆಚ್ಚಳ!

ಕಳೆದ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ಬಾರಿ ಬೈಕ್‌ಗಳ ಮಾರಾಟದಲ್ಲಿ ಶೇ.17ರಷ್ಟು ಹೆಚ್ಚಳವಾಗಿವೆ. ಮೊಪೆಡ್ ಗಳ ಮಾರಾಟ ಶೇ.16ರಷ್ಟು ಏರಿಕೆಯಾಗಿದೆ. ಒಟ್ಟಾರೆ ದ್ವಿಚಕ್ರ ವಾಹನಗಳ ಮಾರಾಟವನ್ನು ಪರಿಗಣಿಸಿದರೆ ಅದು ಕೂಡ ಶೇ. 64 ರಷ್ಟು ಹೆಚ್ಚಾಗಿರುವುದು ವಿಶೇಷ.

2024-25ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಹೋಂಡಾ ಕಂಪನಿಯ ಮೋಟಾರ್‌ಸೈಕಲ್‌ಗಳು ಅತಿ ಹೆಚ್ಚು ಮಾರಾಟವಾಗಿವೆ. ಈ ಅವಧಿಯಲ್ಲಿ ಹೋಂಡಾ 7,94,835 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಸುಮಾರು 8 ಲಕ್ಷ ವಾಹನಗಳ ಮಾರಾಟದೊಂದಿಗೆ, ಕಳೆದ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಹೋಂಡಾ ಶೇಕಡಾ 35 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಹೋಂಡಾದ ಆಕ್ಟಿವಾ ಸ್ಕೂಟರ್‌ಗೆ ಕೂಡ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಇದರ 110 cc ಮತ್ತು 125 cc ರೂಪಾಂತರಗಳು ಸಾಕಷ್ಟು ಜನಪ್ರಿಯವಾಗಿವೆ. ಹೋಂಡಾ ನಂತರ ಟಿವಿಎಸ್ ಮೋಟಾರ್ ಕಂಪನಿ ಸ್ಕೂಟರ್ ಮಾರಾಟ ವಿಭಾಗದಲ್ಲಿ ಎರಡನೇ ಸ್ಥಾನದಲ್ಲಿದೆ.

ಮೊದಲ ತ್ರೈಮಾಸಿಕದಲ್ಲಿ ಟಿವಿಎಸ್ 3,86,633 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಟಿವಿಎಸ್ ಐಕ್ಯೂಬ್‌ನ 49,164 ಮಾದರಿಗಳು ಮಾರಾಟವಾಗಿವೆ. ಆದರೆ ಕಳೆದ ವರ್ಷ ಟಿವಿಎಸ್‌ನ ಮಾರುಕಟ್ಟೆ ಪಾಲು ಶೇ.24.65 ರಷ್ಟಿತ್ತು. ಈಗ ಅದು ಶೇ.23ಕ್ಕೆ ಇಳಿದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...