alex Certify BREAKING NEWS : ಟ್ವಿಟರ್ ಖಾತೆಗಳ ರದ್ದು ಪ್ರಶ್ನಿಸಿದ್ದ ಅರ್ಜಿ ವಜಾ : 50 ಲಕ್ಷ ದಂಡ ವಿಧಿಸಿದ ಹೈಕೋರ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS : ಟ್ವಿಟರ್ ಖಾತೆಗಳ ರದ್ದು ಪ್ರಶ್ನಿಸಿದ್ದ ಅರ್ಜಿ ವಜಾ : 50 ಲಕ್ಷ ದಂಡ ವಿಧಿಸಿದ ಹೈಕೋರ್ಟ್

ಬೆಂಗಳೂರು :   ಕೆಲವು ಸೋಶಿಯಲ್ ಮೀಡಿಯಾ ಖಾತೆಗಳು ಮತ್ತು ಟ್ವೀಟ್ ಗಳನ್ನು ನಿರ್ಬಂಧಿಸುವ ಕೇಂದ್ರದ ಆದೇಶದ ವಿರುದ್ಧ ಟ್ವಿಟರ್ ಸಲ್ಲಿಸಿದ್ದ ಮನವಿಯನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದ್ದು, ಕಂಪನಿಗೆ 5೦ ಲಕ್ಷ ರೂ.ಗಳ ದಂಡವನ್ನು ವಿಧಿಸಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊರಡಿಸಿದ ಆದೇಶಗಳನ್ನು ಟ್ವಿಟರ್ ಕಳೆದ ವರ್ಷ ಪ್ರಶ್ನಿಸಿತ್ತು. ಫೆಬ್ರವರಿ 2021 ಮತ್ತು ಫೆಬ್ರವರಿ 2022 ರ ನಡುವೆ ಹಲವಾರು ಸೋಶಿಯಲ್ ಮೀಡಿಯಾ ಖಾತೆಗಳು ಮತ್ತು ಟ್ವೀಟ್ಗಳನ್ನು ನಿರ್ಬಂಧಿಸಲು ಕೇಂದ್ರವು ಟ್ವಿಟರ್ ಗೆ ಕೇಳಿತ್ತು. ಈ ಪೈಕಿ 39 ಬ್ಲಾಕ್ ಆದೇಶಗಳನ್ನು ಟ್ವಿಟರ್ ಪ್ರಶ್ನಿಸಿತ್ತು.

ದಂಡದ ಮೊತ್ತವನ್ನು 45 ದಿನಗಳಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸುವಂತೆ ಆದೇಶಿಸಲಾಗಿದೆ. 45 ದಿನಗಳಲ್ಲಿ ದಂಡವನ್ನು ಪಾವತಿಸಲು ವಿಫಲವಾದರೆ ದಿನಕ್ಕೆ 5 ಸಾವಿರದಂತೆ ಹೆಚ್ಚುವರಿ ದಂಡ ವಿಧಿಸಲಾಗುತ್ತದೆ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ. ನಿರ್ಬಂಧದ ಆದೇಶಗಳನ್ನು ಹೊರಡಿಸುವ ಮೊದಲು ಸರ್ಕಾರ ಮತ್ತು ಟ್ವಿಟರ್ ಪ್ರತಿನಿಧಿಗಳ ನಡುವೆ ಸುಮಾರು 50 ಸಭೆಗಳು ನಡೆದಿವೆ ಎಂದು ಭಾರತ ಸರ್ಕಾರ ಹೇಳಿದೆ. ಈ ನೆಲದ ಕಾನೂನುಗಳನ್ನು ಅನುಸರಿಸದಿರಲು ಟ್ವಿಟರ್ ಸ್ಪಷ್ಟ ಉದ್ದೇಶ ಹೊಂದಿದೆ ” ಎಂದು ಕೇಂದ್ರವು ನ್ಯಾಯಾಲಯಕ್ಕೆ ತಿಳಿಸಿತ್ತು.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...