alex Certify 50 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಪಾರ್ವತಿ ದೇವಿ ವಿಗ್ರಹ ನ್ಯೂಯಾರ್ಕ್‌ ನಲ್ಲಿ‌ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

50 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಪಾರ್ವತಿ ದೇವಿ ವಿಗ್ರಹ ನ್ಯೂಯಾರ್ಕ್‌ ನಲ್ಲಿ‌ ಪತ್ತೆ

ಅರ್ಧ ಶತಮಾನದ ಹಿಂದೆ ಕುಂಭಕೋಣಂನ ತಂದಂತೋಟ್ಟಂನಲ್ಲಿರುವ ನಾದನಪುರೇಶ್ವರರ್ ಶಿವನ್ ದೇವಾಲಯದಿಂದ ನಾಪತ್ತೆಯಾಗಿದ್ದ ಪಾರ್ವತಿ ದೇವಿಯ ವಿಗ್ರಹವು ಪತ್ತೆಯಾಗಿದೆ.

ತಮಿಳುನಾಡು ಐಡಲ್ ವಿಂಗ್ ಅಪರಾಧ ತನಿಖಾ ಇಲಾಖೆ (ಸಿಐಡಿ) ಸೋಮವಾರ ಈ ವಿಷಯ ತಿಳಿಸಿದ್ದು, ನ್ಯೂಯಾರ್ಕ್‌ನ ಬೋನ್‌ಹಾಮ್ಸ್ ಹರಾಜು ಕೇಂದ್ರದಲ್ಲಿ ವಿಗ್ರಹ ಪತ್ತೆಯಾಗಿದೆ ಎಂದು ಸಿಐಡಿ ಹೇಳಿದೆ.

ವಿಗ್ರಹ ನಾಪತ್ತೆ ಸಂಬಂಧ 1971ರಲ್ಲಿ ಸ್ಥಳೀಯ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ ಫೆಬ್ರವರಿ 2019ರಲ್ಲಿ ಕೆ. ವಾಸು ಎಂಬುವರ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿದ್ದರೂ, ಪ್ರಕರಣ ಬಾಕಿ ಉಳಿದಿತ್ತು.

ಐಡಲ್ ವಿಂಗ್ ಇನ್ಸ್‌ಪೆಕ್ಟರ್ ಎಂ. ಚಿತ್ರಾ ಅವರು ತನಿಖೆ ಕೈಗೆತ್ತಿಕೊಂಡ ನಂತರ ವಿದೇಶದಲ್ಲಿನ ವಿವಿಧ ವಸ್ತುಸಂಗ್ರಹಾಲಯಗಳು ಮತ್ತು ಹರಾಜು ಕೇಂದ್ರಗಳಲ್ಲಿ ಚೋಳರ ಕಾಲದ ಪಾರ್ವತಿ ವಿಗ್ರಹಗಳನ್ನು ಹುಡುಕಲು ಮಾಡಲು ಪ್ರಾರಂಭಿಸಿದ ನಂತರ ಇದು ಗಮನ ಸೆಳೆಯಿತು.

ಚೋಳರ ಕಾಲದ ಸುಮಾರು 12 ನೇ ಶತಮಾನದ ತಾಮ್ರ- ಮಿಶ್ರಲೋಹದ ವಿಗ್ರಹವು ಸುಮಾರು 52 ಸೆಂ ಮೀ ಎತ್ತರವಿದೆ. ಇದರ ಮೌಲ್ಯ ಸುಮಾರು 1.68 ಕೋಟಿ ರೂ.‌ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಡಲ್ ವಿಂಗ್ ಸಿಐಡಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಜಯಂತ್ ಮುರಳಿ ಅವರ ಪ್ರಕಾರ, ಅವರ ತಂಡವು ವಿಗ್ರಹವನ್ನು ಮರಳಿ ತರಲು ದಾಖಲೆಗಳನ್ನು ಸಿದ್ಧಪಡಿಸಿದೆ.

— Jayanth Murali IPS (R),Author of “42 Mondays” (@jayantmuraliips) August 8, 2022

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...