
ಶಾಹುರಾಜ್ ಶಿಂಧೆ ನಿರ್ದೇಶನದ ಸಚಿನ್ ಧನಪಾಲ್ ಅಭಿನಯದ ʼಚಾಂಪಿಯನ್ʼ ಸಿನಿಮಾ 50 ದಿನಗಳನ್ನು ಪೂರೈಸುವ ಸಮೀಪದಲ್ಲಿದ್ದು, ರಾಜ್ಯಾದ್ಯಂತ ಯಶಸ್ವಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಕಾಂತಾರ ಚಿತ್ರದ ಅಬ್ಬರದ ನಡುವೆಯೂ ‘ಚಾಂಪಿಯನ್’ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಶಿವಂ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಶಿವಾನಂದ್ ಎಸ್. ನೀಲಣ್ಣ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಸಚಿನ್ ಧನಪಾಲ್ ಗೆ ಜೋಡಿಯಾಗಿ ಅಧಿತಿ ಪ್ರಭುದೇವ ಅಭಿನಯಿಸಿದ್ದು, ಚಿಕ್ಕಣ್ಣ, ಪ್ರದೀಪ್ ರಾವತ್, ಸುಮನ್, ರಂಗಾಯಣ ರಘು, ಶೋಭ್ ರಾಜ್, ಆದಿ ಲೋಕೇಶ್, ಮಂಡ್ಯ ರಮೇಶ್, ಸುಧಾ ಬೆಳವಾಡಿ, ಅರುಣಾ ಬಾಲರಾಜ್, ಅವಿನಾಶ್, ಹಾಗೂ ಡೈನಾಮಿಕ್ ಸ್ಟಾರ್ ದೇವರಾಜ್ ಸೇರಿದಂತೆ ಸಾಕಷ್ಟು ಕಲಾವಿದರು ಬಣ್ಣಹಚ್ಚಿದ್ದಾರೆ.
ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ನೀಡಿದ್ದಾರೆ.