ಮನಸ್ಸಿದ್ದಲ್ಲಿ ಮಾರ್ಗ ಅನ್ನೋ ಮಾತೇ ಇದೆ. ಯಾವ ಸಾಧನೆಗೂ ವಯಸ್ಸು ಅಡ್ಡಿಯಾಗುವುದೇ ಇಲ್ಲ. ದೇಹವನ್ನು ಫಿಟ್ ಆಗಿಟ್ಟುಕೊಳ್ಳುವುದಕ್ಕೂ ವಯಸ್ಸಿಗೂ ಯಾವುದೇ ಸಂಬಂಧವಿಲ್ಲ. ಇದಕ್ಕೆ ಸಾಕ್ಷಿ ಅಂದ್ರೆ ಗಾಯಕ ಶಾನ್. ಕಠಿಣ ಪರಿಶ್ರಮದಿಂದಲೇ ಶಾನ್ ದೈಹಿಕವಾಗಿ ಸಂಪೂರ್ಣ ಬದಲಾಗಿದ್ದಾರೆ. ವಯಸ್ಸು 50 ದಾಟಿದ್ರೂ 25ರ ಹರೆಯದವರಂತೆ ಫಿಟ್ ಬಾಡಿ ಬೆಳೆಸಿದ್ದಾರೆ ಈ ಗಾಯಕ.
ತೂಕ ಕಳೆದುಕೊಳ್ಳುವುದರ ಜೊತೆಜೊತೆಗೆ ದೇಹವನ್ನು ಸಂಪೂರ್ಣವಾಗಿ ಮಾರ್ಪಡಿಸಿಕೊಂಡಿದ್ದಾರೆ. ಇದಕ್ಕಾಗಿ ಶಾನ್ ಏನೇನು ಮಾಡಿದ್ದಾರೆ ಅನ್ನೋದೇ ಸಖತ್ ಇಂಟ್ರೆಸ್ಟಿಂಗ್. ಆಬ್ಸ್ ಬೆಳೆಸಿಕೊಳ್ಳಬೇಕು ಎಂಬ ಹಂಬಲದಲ್ಲಿರುವವರು ಗಾಯಕ ಶಾನ್ರನ್ನು ತಾಜಾ ಉದಾಹರಣೆಯಾಗಿ ತೆಗೆದುಕೊಳ್ಳಬಹುದು.
ಶಾನ್ ಮಾಡಿಕೊಂಡಿರೋ ಈ ರೂಪಾಂತರವನ್ನು ಅವರ ಪತ್ನಿ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಶಾನ್ ಪ್ರಮುಖವಾಗಿ ಆಹಾರದ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಶಾನ್ ರಾತ್ರಿ ಲಘು ಆಹಾರವನ್ನು ಸೇವಿಸುತ್ತಾರೆ. ಹೆಚ್ಚಾಗಿ ಸಾವಯವ ಆಹಾರವನ್ನೇ ಸೇವಿಸುತ್ತಾರೆ. ಅದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಜೊತೆಗೆ ತೂಕವನ್ನು ಸಹ ನಿಯಂತ್ರಿಸುತ್ತದೆ.
ಶಾನ್ ತಮ್ಮ ಆಹಾರಕ್ರಮವನ್ನು ಆಬ್ಸ್ಗಾಗಿಯೇ ಬದಲಾಯಿಸಿದ್ದಾರೆ. ದೈನಂದಿನ ಆಹಾರದಲ್ಲಿ ಹೆಚ್ಚಿನ ಫೈಬರ್ ಮತ್ತು ಪ್ರೋಟೀನ್ ಇರುವ ಪದಾರ್ಥಗಳನ್ನೇ ಸೇವಿಸುತ್ತಾರೆ. ಕೊಬ್ಬು ಮತ್ತು ಅತಿಯಾದ ಕಾರ್ಬೋಹೈಡ್ರೇಟ್ ಇರುವ ಪದಾರ್ಥಗಳನ್ನು ದೂರವಿಟ್ಟಿದ್ದಾರೆ. ಅಷ್ಟೇ ಅಲ್ಲ ಶಾನ್, ಜಿಮ್ ನಲ್ಲೂ ಬೆವರಿಳಿಸಿಸ್ತಾರೆ.
ಪ್ರತಿನಿತ್ಯ ಜಿಮ್ಗೆ ಹೋಗಿ ವೇಯ್ಟ್ ಟ್ರೈನಿಂಗ್ ಪಡೆಯುತ್ತಾರೆ. ನಿಯಮಿತ ವ್ಯಾಯಾಮ ಮಾಡ್ತಾರೆ. ಉತ್ತಮ ಡಯಟ್ ಮತ್ತು ಸರಿಯಾದ ವರ್ಕೌಟ್ ವಿಧಾನವನ್ನು ಅಳವಡಿಸಿಕೊಂಡರೆ 50 ದಾಟಿದ ಮೇಲೆ ಕೂಡ ಪ್ರತಿಯೊಬ್ಬರೂ ಫಿಟ್ ಆಗಿರುವ ದೇಹವನ್ನು ಪಡೆಯಬಹುದು. ತೂಕವನ್ನು ಕಳೆದುಕೊಳ್ಳಲು ದೈಹಿಕ ವ್ಯಾಯಾಮದಷ್ಟೇ ಆಹಾರ ಕ್ರಮವೂ ಮುಖ್ಯವಾಗಿದೆ.