ಐದು ವರ್ಷದ ಕಾಲಿ ತನ್ನ ತಂದೆಯೊಂದಿಗೆ ಸರ್ಫಿಂಗ್ ಮಾಡುತ್ತಿದ್ದ ವೇಳೆ ನೀರಿನಲ್ಲಿ ಅದೆಷ್ಟು ದೂರ ಹೋಗಿಬಿಟ್ಟ ಎಂದರೆ ಆತನಿಗೆ ಸಮುದ್ರದಲ್ಲಿ ಅಪರಿಚಿತ ಜೀವಿಯೊಂದು ಕಾಣಿಸುವ ಮಟ್ಟಿಗೆ!
ತನ್ನ ಕಣ್ಣಿಗೆ ಕಂಡ ಆ ದೈತ್ಯ ಜೀವಿ ಶಾರ್ಕ್ ಎಂದು ತಿಳಿದೊಡನೆಯೇ ಗಾಬರಿಗೊಂಡ ಬಾಲಕ ಕೂಡಲೇ ಜೋರಾಗಿ ತನ್ನ ತಂದೆಯತ್ತ ಕೂಗುತ್ತಾನೆ. ನೀರಿನ ಮಧ್ಯೆ ಪ್ಯಾಡಲ್ ಬೋರ್ಡ್ ಮೇಲಿರುವ ಕಾಲಿ, ಶಾರ್ಕ್ ಕಂಡೊಡನೆಯೇ , “ಏನದು?” ಎಂದು ಕೇಳುತ್ತಾನೆ.
ತನ್ನ ಮನೆಯಂಗಳದಿಂದ ಸ್ವಲ್ಪವೇ ದೂರದಲ್ಲಿರುವ ಜಾಗದಲ್ಲಿ ಶಾರ್ಕ್ ಒಂದು ಕಾಣಿಸಿಕೊಂಡಿದ್ದನ್ನು ಕಂಡು ದಂಗುಬಡಿದ ತಂದೆ ಗೆರ್ರೆಟ್ ಈ ಸನ್ನಿವೇಶವನ್ನು ಶಾಂತಚಿತ್ತತೆಯಿಂದ ನಿಭಾಯಿಸಿ ಮಗನನ್ನು ಸುರಕ್ಷತೆಯತ್ತ ಕೊಂಡೊಯ್ಯತಾರೆ.
ಇಂತ ಅಪಾಯಕಾರಿ ಸಂದರ್ಭದ ಮುನ್ಸೂಚನೆ ಅರಿಯದೇ ಐದು ವರ್ಷದ ಮಗುವನ್ನು ಅಷ್ಟು ದೂರಕ್ಕೆ ಸರ್ಫಿಂಗ್ ಮಾಡಲು ಬಿಟ್ಟಿದ್ದೇಕೆ ಎಂದು ನೆಟ್ಟಿಗರು ಗೆರ್ರೆಟ್ರನ್ನು ಪ್ರಶ್ನಿಸಿದ್ದಾರೆ.