
ಆಕೆಯ ನಿವಾಸವಿರುವ ಲುಂಗ್ಲೀಯಲ್ಲಿ ಸೇನಾ ಪಡೆಯ ಅಸ್ಸಾಂ ರೈಫಲ್ಸ್ ಯೋಧರೊಂದಿಗೆ ಎಸ್ತರ್ ಹಾಡಿದ್ದಾಳೆ. ಈ 2 ನಿಮಿಷಗಳ ವಿಡಿಯೊವನ್ನು ಕಂಡು ಮಿಜೊರಾಂ ಮುಖ್ಯಮಂತ್ರಿ ಕೂಡ ಮೆಚ್ಚುಗೆ ಸೂಚಿಸಿ, ಮುದ್ದಾಗಿದೆ ಎಂದು ಕೊಂಡಾಡಿದ್ದಾರೆ.
ನಿವೃತ್ತ ಏರ್ ಮಾರ್ಷಲ್ ಅನಿಲ್ ಚೋಪ್ರಾ ಅವರು ಕೂಡ ಬಾಲಕಿಯ ರಾಷ್ಟ್ರಭಕ್ತಿ, ಆಕೆಯು ಸಲ್ಲಿಸಿದ ಗೌರವಕ್ಕೆ ಫಿದಾ ಆಗಿದ್ದಾರೆ. ಜತೆಗೆ ಸೇನಾ ಬ್ಯಾಂಡ್ ಪಡೆಯು ಆಕೆಯನ್ನು ಸಂಪರ್ಕಿಸಿ, ಮುದ್ದಾದ ಕಂಠದಲ್ಲಿ ರಾಷ್ಟ್ರಗೀತೆಯನ್ನು ಧ್ವನಿಮುದ್ರಣ ಕೂಡ ಮಾಡಿಕೊಂಡಿದೆಯಂತೆ.
ಸಾಮಾಜಿಕ ಜಾಲತಾಣಗಳಲ್ಲಿ ಏರುತ್ತಲೇ ಇದೆ ಮೋದಿ ಗ್ರಾಫ್: ಟ್ವಿಟರ್‌ನಲ್ಲಿ ಏಳು ಕೋಟಿ ಅನುಯಾಯಿಗಳನ್ನು ಹೊಂದಿರುವ ಪ್ರಧಾನಿ
ಕಳೆದ ವರ್ಷ ಎಸ್ತರ್ ಹಾಡಿದ್ದ ‘ವಂದೇ ಮಾತರಂ’ ಗೀತೆಯ ವಿಡಿಯೋಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಫಿದಾ ಆಗಿ ಟ್ವಿಟರ್‍ನಲ್ಲಿ ಮೆಚ್ಚುಗೆ ಸೂಚಿಸಿದ್ದರು.