ಅಣ್ಣಂದಿರಿಗೆ ತಂಗಿಯ ಮೇಲಿನ ಕಾಳಜಿ ಅಪರಿಮಿತ. ಇಲ್ಲೊಂದು ಪ್ರಕರಣದಲ್ಲಿ ಸೋಫಾದಿಂದ ಇನ್ನೇನು ಕೆಳಗೆ ಉರುಳಿ ತಲೆ ಒಡೆದುಕೊಳ್ಳುತ್ತಿದ್ದ ತನ್ನ ಸಹೋದರಿಯನ್ನು ಐದು ವರ್ಷದ ಅಣ್ಣ ರಕ್ಷಿಸಿದ್ದಾನೆ.
ಅಣ್ಣನು ಕಾಳಜಿ ವಹಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಗೆ ಬಲು ಇಷ್ಟವಾಗಿದೆ. ಸೋಫಾ ಸೆಟ್ ಮೇಲೆ ಅಣ್ಣ – ತಂಗಿ ಕುಳಿತಿದ್ದು, ಆಕೆ ನಿಧಾನವಾಗಿ ಪಕ್ಕದ ಸೋಫಾಗೆ ದಾಟಿಕೊಂಡು ಮಗ್ಗಲು ಬದಲಿಸುವಾಗ ಕೆಳಗೆ ಉರುಳಿಬಿಡುತ್ತಾಳೆ.
ಕ್ಷಣಮಾತ್ರದಲ್ಲಿ ಆಕೆಯ ಅಣ್ಣ ರಕ್ಷಣೆಗೆ ಧಾವಿಸಿ, ಅವಳ ಶರ್ಟ್ ಹಿಡಿದು ಕೆಳಗೆ ಬೀಳದಂತೆ ನೋಡಿಕೊಳ್ಳುತ್ತಾನೆ. ಬಳಿಕ ತಲೆಯನ್ನು ನೇವರಿಸುವುದು ಕಾಣಿಸುತ್ತದೆ. ಇಡೀ ಘಟನೆಯು ಮನೆಯೊಳಗೆ ಹಾಕಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಸಹೋದರನ ಮನಸ್ಸಿನ ಜಾಗೃತಾವಸ್ಥೆ, ಸಮಯೋಚಿತ ಕಾರ್ಯಕ್ಕೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಹೋದರನ ಆ ಕ್ಷಣದ ಕಾಳಜಿಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದು, ವಿಡಿಯೋವನ್ನು ರೀ ಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ದಾಖಲಿಸುತ್ತಿದ್ದಾರೆ.