ಮದುಮಗನೊಂದಿಗೆ ಓಡಿಹೋಗುತ್ತಿರುವ ಕುದುರೆಯ ವಿಡಿಯೋವನ್ನು ರಾಜಸ್ಥಾನದ ಅಜ್ಮೇರ್ನಲ್ಲಿ ರೆಕಾರ್ಡ್ ಮಾಡಲಾಗಿದೆ.
ಜುಲೈನಲ್ಲಿ ನಡೆದ ಈ ಘಟನೆಯಲ್ಲಿ, ಮದುವೆ ಮನೆ ಪ್ರವೇಶಿಸಲು ಕಾಯುತ್ತಿದ್ದ ಮದುಮಗನ ಬರಮಾಡಿಕೊಳ್ಳಲು ಸಿಡಿಸಿದ ಪಟಾಕಿಗೆ ಗಾಬರಿಗೊಂಡ ಕುದುರೆ ನಿಯಂತ್ರಣ ತಪ್ಪಿ ಅಲ್ಲಿಂದ ಓಡಿ ಹೋಗಿತ್ತು. ನಾಲ್ಕು ಕಿಮೀಗಳವರೆಗೂ ಕುದುರೆಯನ್ನು ಅಟ್ಟಿಸಿಕೊಂಡು ಹೋದ ಮಂದಿ, ವರನನ್ನು ಸುರಕ್ಷಿತವಾಗಿ ಮದುವೆ ಮನೆಗೆ ಕರೆತಂದಿದೆ.
ಹೆಲಿಕಾಪ್ಟರ್ ಮದುವೆಗಳ ಮೇಲೆ ಹೀಗೊಂದು ಕಾಮೆಂಟರಿ
ರಾಜಸ್ಥಾನದ ಮತ್ತೊಂದು ಮದುವೆಯ ವಿಡಿಯೋವೊಂದು ವೈರಲ್ ಆಗಿದ್ದು, ಹೆಲಿಕಾಪ್ಟರ್ನಲ್ಲಿ ಮದುವೆ ಆಯೋಜಿಸಿದ್ದನ್ನು ನೋಡಲು ನೆರೆದಿದ್ದ ಜನರು ಹಾಗೂ ಊರಿನಲ್ಲಿ ನೆಲೆಸಿದ್ದ ಪರಿಸ್ಥಿತಿಯನ್ನು ವಿವರಿಸುತ್ತಿದ್ದ ನಿರೂಪಕನ ಸಖತ್ ಕಾಮೆಂಟರಿ ನೆಟ್ಟಿಗರನ್ನು ನಕ್ಕು ನಕ್ಕು ಹೊಟ್ಟೆ ಹುಣ್ಣಾಗುವಂತೆ ಮಾಡಿತ್ತು.
ನನಗೆ ಮೊದಲು ಮೇಕಪ್ ಮಾಡಿ ಎಂದ ವರ
ದೇಸೀ ವರನೊಬ್ಬ ತನ್ನ ಭಾವೀ ಪತ್ನಿಗಿಂತ ಮೊದಲು ತನಗೆ ಮೇಕಪ್ ಮಾಡಬೇಕೆಂದು ಭಾರೀ ಉತ್ಸಾಹದಲ್ಲಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇನ್ಸ್ಟಾಗ್ರಾಂನಲ್ಲಿ ಅಕ್ಟೋಬರ್ ತಿಂಗಳಲ್ಲಿ ವೈರಲ್ ಆಗಿದ್ದ ಈ ವಿಡಿಯೋದಲ್ಲಿ, “ಹುಡುಗಿಯರು ಮೇಕಪ್ ಮಾಡಿಕೊಳ್ಳುವಾಗ ಹುಡುಗರು ಏಕೆ ಮಾಡಿಕೊಳ್ಳಬಾರದು? ನಾನು ಸ್ಪಷ್ಟವಾಗಿ ಹೇಳುತ್ತೇನೆ.. ನಾನಂತೂ ಮಾಡುತ್ತೇನೆ,” ಎಂದು ಮೇಕಪ್ ಕಲಾವಿದೆಗೆ ಮದುವೆ ಗಂಡು ಹೇಳುತ್ತಿರುವುದನ್ನು ಕೇಳಬಹುದಾಗಿದೆ.
ತಾನು ಸಜ್ಜಾಗಲು ಅವಕಾಶ ನೀಡುವಂತೆ ಮದುಮಗಳು ವರನನ್ನು ಬೇಡಿಕೊಂಡರೂ ಸಹ ಆತನಿಗೆ ತನ್ನ ವಿಶೇಷ ದಿನದಂದು ಚೆನ್ನಾಗಿ ಕಾಣಬೇಕೆಂಬ ಇಚ್ಛೆ ಭಾರೀ ದೊಡ್ಡದಾಗಿತ್ತು.
https://youtu.be/JmoVAcnyNic
ಎಕ್ಸ್ಕಾವೇಟರ್ನಲ್ಲಿ ಊರಿಗೆ ಬಂದ ಪಾಕ್ ನವದಂಪತಿ
ಪಾಕಿಸ್ತಾನದ ನವವಿವಾಹಿತ ಜೋಡಿಯೊಂದು ತಮ್ಮ ಮದುವೆ ಮುಗಿದ ಬಳಿಕ ಊರಿಗೆ ಎಕ್ಸ್ಕಾವೇಟರ್ನಲ್ಲಿ ಆಗಮಿಸಿದೆ. ಮದುವೆಯ ಧಿರಿಸಿನಲ್ಲಿ ಮಿಂಚುತ್ತಿರುವ ಈ ಜೋಡಿ ಎಕ್ಸ್ಕಾವೇಟರ್ನ ಮುಂಬದಿಯ ಬಕೆಟ್ನಲ್ಲಿ ಕುಳಿತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಪಾಕಿಸ್ತಾನದ ಗಿಲ್ಗಿಟ್-ಬಾಲ್ಟಿಸ್ಟಾನ್ ಪ್ರದೇಶದ ಹುಂಜ಼ಾ ಪ್ರದೇಶದಲ್ಲಿ ಈ ವಿಡಿಯೋ ರೆಕಾರ್ಡ್ ಮಾಡಲಾಗಿದೆ.
ರೊಮ್ಯಾಂಟಿಕ್ ನೃತ್ಯ ಮಾಡುವ ವೇಳೆ ಕೆಳಗೆ ಬಿದ್ದ ನವವಿವಾಹಿತರು
ಮದುವೆ ಸಮಾರಂಭದ ವೇಳೆ ಪರಸ್ಪರ ಕಣ್ಣಿನಲ್ಲಿ ಕಣ್ಣಿಟ್ಟು ನೋಡುತ್ತಾ ಸ್ಟೆಪ್ ಹಾಕುತ್ತಿದ್ದ ಮದುಮಕ್ಕಳು, ಕ್ಲಾಸಿಕ್ ರೊಮ್ಯಾಂಟಿಕ್ ಸ್ಟೆಪ್ ಹಾಕುವ ಭರದಲ್ಲಿ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದ ವಿಡಿಯೋವೊಂದು ಭಾರೀ ವೈರಲ್ ಆಗಿತ್ತು.
“ಪ್ರೀತಿಯಲ್ಲಿ ಬೀಳೋದು ಅಂದ್ರೆ ಹೀಗೂ ಇರುತ್ತಾ,” ಎಂಬರ್ಥ ಕ್ಯಾಪ್ಷನ್ ಈ ವಿಡಿಯೋಗೆ ಭಾರೀ ಆಪ್ಯಾಯಮಾನವಾಗಿ ಕಂಡಿತ್ತು.