alex Certify ಎರಡು ಭಾರತಗಳಿಂದ ಬಂದಿದ್ದೇನೆ ಎನ್ನುವ ಮೂಲಕ ವಿವಾದ ಸೃಷ್ಟಿಸಿದ ಕಾಮೆಡಿಯನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡು ಭಾರತಗಳಿಂದ ಬಂದಿದ್ದೇನೆ ಎನ್ನುವ ಮೂಲಕ ವಿವಾದ ಸೃಷ್ಟಿಸಿದ ಕಾಮೆಡಿಯನ್

ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿ ಮಾಡುವ ಕಾಮೆಡಿಯನ್ ವೀರ್‌ ದಾಸ್‌ ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಲಾದ ವಿಡಿಯೋವೊಂದರ ಮೂಲಕ ಹೊಸದೊಂದು ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ.

ವಾಷಿಂಗ್ಟನ್‌ ಡಿ.ಸಿ.ಯ ಜಾನ್‌ ಎಫ್ ಕೆನಡಿ ಕೇಂದ್ರದಲ್ಲಿ ನಡೆದ ಇವೆಂಟ್‌ನಲ್ಲಿ ಕೊಟ್ಟ ಪ್ರದರ್ಶನವೊಂದರ ವಿಡಿಯೋವೊಂದು ಭಾರೀ ವಿವಾದಕ್ಕೆ ಗ್ರಾಸವಾಗಿದೆ. ’ನಾನು ಎರಡು ಭಾರತಗಳಿಂದ ಬಂದಿದ್ದೇನೆ,” ಎನ್ನುವ ವೀರ್‌ ದಾಸ್, ದೇಶದಲ್ಲಿ ಘಟಿಸುತ್ತಿರುವ ಇಬ್ಬಂದಿತನದ ವಿಚಾರಗಳ ಉಲ್ಲೇಖ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಪರ-ವಿರೋಧಗಳ ಚರ್ಚೆಗೆ ಗ್ರಾಸವಾಗಿದೆ.

ವೀರ್‌ ದಾಸ್ ಭಾರತಕ್ಕೆ ಅವಮಾನ ಮಾಡುವ ಮಾತುಗಳನ್ನು ಆಡಿದ್ದಾರೆ ಎಂದು ಕೆಲವೊಂದು ರಾಜಕಾರಣಿಗಳು ಹಾಗೂ ನೆಟ್ಟಿಗರು ತೀವ್ರವಾಗಿ ಟೀಕೆ ಮಾಡಿದ್ದಾರೆ. ಈ ಹಿಂದೆಯೂ ಸಹ ಬಹಳಷ್ಟು ಬಾರಿ ಪ್ರದರ್ಶನಗಳ ವೇಳೆ ಆಡಿದ ಮಾತುಗಳಿಂದ ವೀರ್‌ ದಾಸ್ ಭಾರೀ ವಿವಾದಕ್ಕೆ ಸಿಲುಕಿದ್ದಾರೆ.

ವಿಮಾನ ನಿಲ್ದಾಣದಲ್ಲೇ ‘ಮದ್ಯ’ ಹಂಚಿಕೊಂಡ ಯುವತಿಯರು: ವಿಡಿಯೋ ವೈರಲ್

ಕೋವಿಡ್‌ನಿಂದ ರಕ್ಷಿಸಿಕೊಳ್ಳಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ತೆಗೆದುಕೊಳ್ಳದೇ ಇದ್ದ ತನ್ನ ವಿರುದ್ಧ ಹಿರಿಯ ನಾಗರಿಕರೊಬ್ಬರು ಕಿಡಿ ಕಾರಿದ ಘಟನೆಯ ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದ ವೀರ್‌ ದಾಸ್, ಆಗಲೂ ಭಾರೀ ವಿವಾದ ಸೃಷ್ಟಿಸಿದ್ದರು. ಬಳಿಕ ಈ ವಿಡಿಯೋ ಹಿಂಪಡೆದು, ವಿವಾದ ಇತ್ಯರ್ಥವಾಗಿದೆ ಎಂದು ವೀರ್‌ ಹೇಳಿಕೊಂಡಿದ್ದರು ಸಹ ಡ್ಯಾಮೇಜ್ ಅದಾಗಲೇ ಆಗಿ ಹೋಗಿತ್ತು.

ಇನ್ನೊಂದು ಘಟನೆಯಲ್ಲಿ; ಸಲಿಂಗಿಗಳನ್ನು ಉಲ್ಲೇಖಿಸಬೇಕಾದ ವೇಳೆ ಯಾವ ಶಬ್ದ ಬಳಸಬೇಕೆಂಬ ವಿಚಾರವನ್ನು ವ್ಯಂಗ್ಯವಾಗಿ ಆಡಿದ ವೀರ್‌ ದಾಸ್‌ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಈ ಘಟನೆ ವಿಚಾರವಾಗಿ ಕಾನೂನಾತ್ಮಕ ಕ್ರಮವನ್ನೇನೂ ಎದುರಿಸದ ದಾಸ್, ಸೂಕ್ಷ್ಮ ಸಂವೇದನೆ ಇಲ್ಲದೇ ಮಾತನಾಡುತ್ತಾರೆ ಎಂದು ಭಾರೀ ಟೀಕೆಗೆ ಗುರಿಯಾಗಿದ್ದರು.

ಮಗಳಿಂದ ತಾಯಿ ಪಡೀತಾಳೆ ಮನೆ ಬಾಡಿಗೆ…! ಇದರ ಹಿಂದಿದೆ ಕಾರಣ

2016ರಲ್ಲಿ ಬಿಡುಗಡೆಯಾದ ಮಸ್ತಿಜ಼ಾದೆ ಚಿತ್ರದ ದೃಶ್ಯವೊಂದರಲ್ಲಿ ದೇವಸ್ಥಾನದ ಒಳಗೆ ಕಾಂಡೋಮ್ ಮಾರಾಟ ಮಾಡುವ ವಿಚಾರವಾಗಿ ಸನ್ನಿ ಲಿಯೋನ್ ಹಾಗೂ ವೀರ್‌ ದಾಸ್ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು.

ಇದೇ ವೀರ್‌ ದಾಸ್‌‌ರ ’ಹಸ್ಮುಖ್’ ಎಂಬ ಹೆಸರಿನ ವೆಬ್ ಸೀರೀಸ್ ಒಂದರಲ್ಲಿ ವಕೀಲರನ್ನು ಅವಹೇಳನಕಾರಿಯಾಗಿ ತೋರಲಾಗಿದೆ ಎಂದು ಆಪಾದಿಸಿ ವಕೀಲರ ಸಂಘವೊಂದು ದೆಹಲಿ ಹೈಕೋರ್ಟ್‌ನಲ್ಲಿ ದೂರು ಸಲ್ಲಿಸಿ, ವೆಬ್ ಸೀರೀಸ್‌ ಬಿಡುಗಡೆಗೆ ಸ್ಟೇ ತರಬೇಕೆಂದು ಆಗ್ರಹಿಸಿದ್ದರು. ಆದರೆ ವೆಬ್ ಸೀರೀಸ್ ಬಿಡುಗಡೆಗೆ ಸ್ಟೇ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...